ಆಸ್ಟ್ರೇಲಿಯ (ವಿಶ್ವ ಕನ್ನಡಿಗ ನ್ಯೂಸ್): ಭಾರತ ಮತ್ತು ಆಸ್ಟ್ರೇಲಿಯ ನಡುವೆ ಸಿಡ್ನಿಯಲ್ಲಿ ನಡೆಯುತ್ತಿರುವ ಪ್ರಥಮ ಏಕದಿನ ಪಂದ್ಯದಲ್ಲಿ ಚಹಾಲ್ ಹತ್ತು ಓವರ್ ಗಳಲ್ಲಿ 89/1 ರನ್ ನೀಡುವ ಮೂಲಕ ಇದುವರೆಗೆ ಭಾರತದ ಯಾವುದೇ ಸ್ಪಿನ್ನರ್ ಬಿಟ್ಟುಕೊಟ್ಟ ಅತ್ಯಧಿಕ ರನ್ ಎಂಬ ಕೆಟ್ಟ ದಾಖಲೆಗೆ ಸೇರಿದ್ದಾರೆ.
ಕಳೆದ ವರ್ಷ ಇಂಗ್ಲೆಂಡಿನ ವಿರುದ್ದ 88 ರನ್ ಬಿಟ್ಟುಕೊಟ್ಟು ಎರಡನೇ ಸ್ಥಾನದಲ್ಲೂ ಚಹಾಲ್ ಇರುವುದು ವಿಶೇಷ!ಪಾಕಿಸ್ತಾನದ ವಿರುದ್ಧ 85 ರನ್ ಬಿಟ್ಟುಕೊಟ್ಟ ಪಿಯೂಷ್ ಚಾವ್ಲಾ ಮೂರನೇ ಸ್ಥಾನದಲ್ಲಿದ್ದಾರೆ.