ಡಿಕೆಎಸ್ಸಿ ತಬೂಕ್ ಘಟಕ ನೂತನ ಕಛೇರಿ ಉದ್ಘಾಟನೆ

ಜೆದ್ದಾ(www.vknews.in): ಕರ್ನಾಟಕ ಸುನ್ನಿ ಸೆಂಟರ್ ತಬೂಕ್ ಘಟಕವು ಸುಮಾರು 20 ವರ್ಷಗಳಿಂತಳೂ ಮೇಳ್ಪಟು ಸಹೃದಯಿ ಭಾಂದವರ ಸಹಕಾರದಿಂದ ಮುನ್ನಡೆಯುತ್ತಿದ್ದು ಇದೀಗ ಹೊಸದಾಗಿ ಸುಸಜ್ಜಿತವಾದ ಕಛೇರಿಯನ್ನು ಇತ್ತೀಚೆಗೆ ನಗರದ ಫೈಸಲೀಯದಲ್ಲಿ ಜೊತೆ ಕಾರ್ಯದರ್ಶಿ ವಹಬ್ ವಳಚಿಲ್ ರವರ ನಿವಾಸದ ಒಂದನೇ ಮಹಡಿಯಲ್ಲಿ ಸಂಸ್ಥೆಯ ಜಿದ್ದಾ ಘಟಕದ ಪ್ರಧಾನ ಕಾರ್ಯದರ್ಶಿಯೂ ಆದ ಬಹುಮಾನ್ಯ ಸೈಯದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ತಂಗಳ್ ಉಚ್ಚಿಲ ರವರು ಉದ್ಘಾಟಿಸಿದರು.

ನಂತರ ನಡೆದ ಮೌಲೀದ್ ಕಾರ್ಯಕ್ರಮ ಭಾರೀ ವಿಜೃಂಭಣೆಯಿಂದ ನಡೆಯಿತು. ಅದರೊಂದಿಗೆ ಕೊವಿಡ್ 19 ನಿಂದಾಗಿ ಸ್ಥಗಿತಗೊಂಡಿದ್ದ ಕಾರ್ಯಚಟುವಟಿಕೆಗೆ ಮರುಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹುಮಾನ್ಯರಾದ ಸೈಯದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ತಂಗಳ್ ಉಚ್ಚಿಲ ರವರು ವಹಿಸಿದ್ದರು, ಕೇಂದ್ರ ಸಮಿತಿಯ ದಾಯಿ ಬಹುಮಾನ್ಯರಾದ P.H.ಇಸ್ಮಾಯಿಲ್ ಉಸ್ತಾದ್ ರವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿ ಸದಸ್ಯರಾದ ಜನಾಬ್ ಅಬ್ದುಲ್ ಮಜೀದ್ ಕನ್ನಂಗಾರ್,ಘಟಕದ ಗೌರವ ಅಧ್ಯಕ್ಷರಾದ ಬಹುಮಾನ್ಯ ರಮ್ಳಾನ್ ಮದನಿ,ಹಕೀಮ್ ದಾರಿಮಿ ಹಾಗೂ ಘಟಕ ಅಧ್ಯಕ್ಷರಾದ ಜನಾಬ್ ಉಮರ್ ವಳಚಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು,ಸ್ವಾಗತ ಮತ್ತು ಧನ್ಯವಾದವನ್ನು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹವೀದ್ ಮಡಿಕೇರಿ ರವರು ನೆರವೇರಿಸಿದರು.

ವರದಿ: ಡಿಕೆಎಸ್ಸಿ ತಬೂಕ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...