ಕನ್ಯಾನ (ವಿಶ್ವಕನ್ನಡಿಗ ನ್ಯೂಸ್):ಮೊತ್ತ ಮೊದಲ ಬಾರಿಗೆ ಕನ್ಯಾನ ಜಂಕ್ಷನ್ನಲ್ಲಿ ಆರಂಭವಾದ ಸುಸಜ್ಜಿತ ಡಯಾಗ್ನಸ್ಟಿಕ್ ಸೆಂಟರ್ ಅನ್ನು ಸಯ್ಯದ್ ಅಹ್ಮದ್ ಮುಕ್ತಾರ್ ತಂಙಳ್ ಕುಂಬೋಳ್ ದುಆ ಮೂಲಕ ಉದ್ಘಾಟಿಸಿ ಆಶಿರ್ವದಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತ ಸೇವಾಶ್ರಮ ಕನ್ಯಾನದ ಕಾರ್ಯದರ್ಶಿ ಶ್ರೀ ಈಶ್ವರ ಭಟ್ಟ ಮಾತನಾಡಿ ಆರೋಗ್ಯದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಶರೀಪ್ ಸಖಾಫಿ ಮದರ್ರಿಸ್ ಉಕ್ಕುಡ,ಹಾಜಿ ಹಮೀದ್ ಬಾಖವಿ ಬೈರಿಕಟ್ಟೆ,ಮುಹಮ್ಮದ್ ರಪೀಕ್ ಲತೀಪಿ ಖತೀಬ್ ಬೈರಿಕಟ್ಟೆ, ಬಿ.ಕೆ ಅಬೂಬಕ್ಕರ್ ಹಾಜಿ ಬೈರಿಕಟ್ಟೆ,
ಕುಮಾರ್ ಭಟ್,ಕೆ.ಪಿ ಅಬ್ದುರಹ್ಮಾನ್ ಕನ್ಯಾನ,ಡಿ.ಕೆ ಅಬ್ದುಲ್ ಖಾದರ್, ಆಶಿಕ್ ಬೈರಿಕಟ್ಟೆ,ಸಪ್ವಾನ್ ಅಳಿಕೆ, ಅಬೂಬಕ್ಕರ್ ಅಂಗ್ರಿ, ಇಕ್ಬಾಲ್ ಕೊಹಿನೂರು,ರಶೀದ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.ಡಿ.ಬಿ ಸಲೀಂ ಹಾಜಿ ಬೈರಿಕಟ್ಟೆ ಸ್ವಾಗತಿಸಿದರು. ಬಿ.ಎಂ ಅಶ್ರಫ್ ಬೈರಿಕಟ್ಟೆ ಧನ್ಯವಾದ ಹೇಳಿದರು.