ಗೂಡಿನಬಳಿ ಯುವ ಕಾಂಗ್ರೆಸ್ ಸಮಿತಿಗೆ ನೂತನ ಸಾರಥ್ಯ.

ಗೂಡಿನಬಳಿ 13 ಹಾಗೂ 14ನೇ ವಾರ್ಡ್ ಗೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಿಝ್ವಾನ್ ಹಾಗೂ ಅಮೀನ್ ಆಯ್ಕೆ.


ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಗೂಡಿನಬಳಿ 13 ಹಾಗೂ 14 ನೇ ವಾರ್ಡಿಗೆ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳ ಆಯ್ಕೆಸಭೆ ಇಂದು ಜಬಲುನ್ನೂರ್ ಕಾಂಪ್ಲೆಕ್ಸ್ ನಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.ಕಾಂಗ್ರೆಸ್ ಮುಖಂಡ ಪರ್ವೇಝ್ ಜಿಕೆ ಇವರ ಉಸ್ತುವಾರಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ವಾರ್ಡ್ 13 ಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಮೀನ್ ಒಮ್ಮತದಿಂದ ಆಯ್ಕೆಗೊಂಡರು.ಉಪಾಧ್ಯಕ್ಷರಾಗಿ ಮುನೀರ್ ಹಾಗೂ ಅಸದ್ ಜಿಕೆ ಆಯ್ಕೆಗೊಂಡರು.ಸಂಘಟನಾ ಕಾರ್ಯದರ್ಶಿಯಾಗಿ ಅಕ್ಬರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಂಶೀರ್ ಎಸ್ಪಿ ರವರನ್ನು ನೇಮಕ ಮಾಡಲಾಯಿತು.ಮುಖ್ಯ ಸಂಘಟಕರಾಗಿ ಆಸಿಫ್, ಇರ್ಷಾದ್, ಆರೀಫ್ ಹಾಗೂ ಉಪ ಸಂಘಟಕರಾಗಿ ಹಾರಿಸ್, ಶಫೀಕ್ ರನ್ನು ನೇಮಕ ಮಾಡಲಾಯಿತು.

ಅದೇ ರೀತಿ 14 ನೇ ವಾರ್ಡಿಗೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಿಝ್ವಾನ್ ಒಮ್ಮತದಿಂದ ಆಯ್ಕೆಗೊಂಡರು.ಉಪಾಧ್ಯಕ್ಷರಾಗಿ ತೌಸೀಫ್ ರವರು ಆಯ್ಕೆಗೊಂಡರು.ಸಂಘಟನಾ ಕಾರ್ಯದರ್ಶಿಯಾಗಿ ಅಲೀಂ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ಅಬೀರ್ ರವರನ್ನು ನೇಮಕ ಮಾಡಲಾಯಿತು.ಮುಖ್ಯ ಸಂಘಟಕರಾಗಿ ಅನ್ಸಾರ್, ಉಬೈದ್, ಸಾದಿಕ್ ಹಾಗೂ ಉಪ ಸಂಘಟಕರಾಗಿ ಸಿನಾನ್, ತೌಸೀಫ್ ಮಿಲನ್, ಶಿಯಾಬ್, ತನ್ವೀರ್ ರನ್ನು ನೇಮಕ ಮಾಡಲಾಯಿತು.ಸಭೆಯಲ್ಲಿ ಹಿರಿಯ ಕಾಂಗ್ರೆಸಿಗರಾದ ಇಸ್ಮಾಯಿಲ್,ರಝಾಕ್ ಹಾಗೂ ಯುವ ಮುಖಂಡರಾದ ಕಾಸಿಂ, ಮುಸ್ತ, ಮುನ್ನ, ಇಸ್ರಾರ್ ಮತ್ತಿತರರು ಉಪಸ್ಥಿತರಿದ್ದರು.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...