ಅಬುಧಾಬಿ (www.vknews.com) : ಬನ್ನಿ ರಕ್ತ ಸಮಬಂಧಿಗಳಾಗೋಣ ಎಂಬ ಪ್ರಮೇಯದೊಂದಿಗೆ ನೇ ಕನ್ನಡ ರಾಜ್ಯೋತ್ಸವ ಮತ್ತು ನೇ ಯುಎಇ ನ್ಯಾಷನಲ್ ಡೇ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಇದೆ ಬರುವ ಡಿಸೆಂಬರ್ 3ಕ್ಕೆ ದುಬೈ ಹೆಲ್ತ್ ಕೇರ್ ಸಿಟಿಯಲ್ಲಿರುವ ಶೇಕ ಲತೀಫಾ ಆಸ್ಪತ್ರೆಯಲ್ಲಿ ಮದ್ಯಾಹ್ನ 2ರಿಂದ ಸಂಜೆ 8ರ ವರೆಗೆ ರಕ್ತದಾನ ಶಿಬಿರ ನಡೆಯಲಿದೆ,
ರಕ್ತದಾನ ಈ ಲೋಕದಲ್ಲಿ ಎಲ್ಲಾ ದಾನಗಳಿಗಿಂತ ಮಹಾ ದಾನ, ಈ ಪ್ರಸಕ್ತ ಕಾಲಘಟ್ಟದಲ್ಲಿ ಜಾತಿ ಧರ್ಮ ಎಂದು ಮನುಷ್ಯರು ಪರಸ್ಪರ ವೈಮನಸ್ಸಿನಿಂದ ಜೀವಿಸುವಾಗ ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದರೆ ರಕ್ತದ ಗುಂಪು ಸಮವಾಗಿದೆಯೇ ಎಂದು ನೋಡುತ್ತಾರೆ ಹೊರತು ಜಾತಿ ಧರ್ಮವನ್ನಲ್ಲ, ಈ ಪ್ರಸಕ್ತ ಕಾಲಘಟ್ಟದಲ್ಲಿ ಮಾನವರ ಮದ್ಯೆ ನಾವೆಲ್ಲಾ ಒಂದೇ ಎಂಬ ಬೆಸುಗೆಯನ್ನು ಸಾರಿ ಹೇಳುದು ಮಾನವ ರಕ್ತ ಮಾತ್ರ, ಅದು ಅಲ್ಲದೆ ಕೋಟ್ಯಂತರ ಅನಿವಾಸಿ ಜನರನ್ನು ಪೋಷಿಸುವ ಈ ಸುಂದರ ಕರ್ಮಭೂಮಿ ಸಂಯುಕ್ತ ಅರಬ್ ಸಂಸ್ಥಾನಕ್ಕೆ ನಮ್ಮ ಒಂದು ಸಣ್ಣ ಮಟ್ಟದ ಋಣ ತೀರಿಸುವ ಒಂದು ಅವಕಾಶವು ಸಹ ಈ ರಕ್ತದಾನ ಆಗಿರುತ್ತೆ,
ತಾವೆಲ್ಲರೂ ಬಂದು ತಮ್ಮವರನ್ನು ಕರೆತಂದು ತಮ್ಮ ಅಮೂಲ್ಯ ರಕ್ತದಾನ ಮಾಡಿ ಈ ಶಿಬಿರವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಮತ್ತು ಈ ಶಿಬಿರವನ್ನು ಸಾಧ್ಯವಾದಷ್ಟು ಸದುಪಯೋಗಪಡಿಸಿಕೊಳ್ಳಬೇಕಾಗಿ ಸಂಘಟಕರು ವಿನಂತಿಸಿದ್ದಾರೆ. ಕಾರ್ಯಕ್ರಮದ ಪ್ರಯುಕ್ತ ಕರೆಯಲಾದ ಪತ್ರಿಕಾಘೋಷ್ಠಿಯಲ್ಲಿ ದುಬೈ ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಉಪಾಧ್ಯಕ್ಷರಾದ ಮಮತಾ ಮೈಸೂರು, ಮುಖ್ಯ ಕಾರ್ಯದರ್ಶಿಯಾದ ಸೆಂತಿಲ್ ಬೆಂಗಳೂರು, ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಮತ್ತು ಸಮಿತಿ ಸದಸ್ಯರುಗಳಾದ ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ, ಡಾ.ಸವಿತಾ ಮೈಸೂರು, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ, ಅನಿತಾ ಬೆಂಗಳೂರು, ಶಂಕರ್ ಬೆಳಗಾವಿ ಮತ್ತು ಮೊಯಿನುದ್ದೀನ್ ಹುಬ್ಬಳ್ಳಿ ಹಾಜರಿದ್ದರು.