ಯುಎಇ(ವಿಶ್ವಕನ್ನಡಿಗ ನ್ಯೂಸ್): ಅರಬ್ ಜಗತ್ತಿನ ಮೊದಲ ಅಂತರ್ ಗ್ರಹ ಮಿಷನ್, ಆದ ಹೋಪ್ ಮಿಷನ್ ಮಂಗಳ ಗ್ರಹ – ಯೋಜನೆಯು ಫೆಬ್ರವರಿ 9 ರಂದು ಮಂಗಳನ ಕಕ್ಷೆಯನ್ನು ತಲುಪಿತು.
ಯುಎಇ ಬಾಹ್ಯಾಕಾಶ ವಿಜ್ಞಾನಿಗಳು ಮಂಗಳ ಗ್ರಹದ ಕಡೆಗೆ ತನ್ನ ಹೋಪ್ ಪ್ರೋಬ್ ನ್ನು ಕಳುಸುವಲ್ಲಿ ಯಶಸ್ವುಯಾಗಿದೆ. ಇದನ್ನು ಕೆಂಪು ಗ್ರಹದಲ್ಲಿ ಹವಾಮಾನದ ರಹಸ್ಯಗಳನ್ನು ಬಿಚ್ಚಿಡುವ ಪ್ರಯಾಣದ ಅತ್ಯಂತ ನಿರ್ಣಾಯಕ ಭಾಗವೆಂದು ಪರಿಗಣಿಸಲಾಗಿದೆ.
ಮಿಷನ್ ಹೋಪ್ ಅನ್ನು 2015 ರಲ್ಲಿ ಘೋಷಿಸಲಾಯಿತು. ಇದು ಅರಬ್ ಪ್ರಪಂಚದ ಮೊದಲ ಅಂತರಗ್ರಹ ಮಿಷನ್ (interplanetary mission) ಆಗಿದೆ.
ಹೋಪ್ ಮಿಷನ್ ಮಂಗಳ ಗ್ರಹವನ್ನು ಸುತ್ತುವ ಬಾಹ್ಯಾಕಾಶ ನೌಕೆಯಾಗಿದ್ದು, ಇದು ಮಂಗಳ ಗ್ರಹದ ವಿರಳ ವಾತಾವರಣವನ್ನು (ತೆಳುವಾದ ವಾತಾವರಣವನ್ನು) ಅಧ್ಯಯನ ಮಾಡುತ್ತದೆ. ಈ ಕಾರ್ಯಾಚರಣೆಯ ಅಧಿಕೃತ ಹೆಸರು ಎಮಿರೇಟ್ಸ್ ಮಾರ್ಸ್ ಮಿಷನ್- (Emirates Mars Mission- EMM), ಆರ್ಬಿಟರ್ ಅನ್ನು ಹೋಪ್ ಅಥವಾ ‘ಅಲ್ ಅಮಲ್’ (‘Al Amal’) ಎಂದು ಹೆಸರಿಸಲಾಗಿದೆ. ಈ ಮಿಷನ್ ಯಶಸ್ವಿಯಾಗಿದ್ದು, ಹೋಪ್ ಆರ್ಬಿಟರ್ ಯುಎಸ್, ಯುರೋಪ್ ಮತ್ತು ಭಾರತದ ಮಂಗಳ ಗ್ರಹದ ಅಧ್ಯಯನ ಮಾಡುವ ಆರು ಕಾರ್ಯಾಚರಣೆಗಳ ಸಾಲಿಗೆ ಸೇರಲಿದೆ.
ತನ್ನ ಯಶಸ್ವಯ ಸಂಭ್ರಮಾಚರಣೆಯನ್ನು ಯುಎಇ ಯಾಧ್ಯಂತ ಆಚರಿಸಲಾಗುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.