ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಸುಲ್ತಾನರ ಎಲ್ಲಾ ಗವರ್ನರೇಟ್ಗಳಲ್ಲಿ ಕೋವಿಡ್ ಹರಡುವಿಕೆಯ ಸಂಖ್ಯೆಯು ಹೆಚ್ಚುತ್ತಿರುವುದರಿಂದ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ಮಾರ್ಚ್ 4 ರಿಂದ ಮಾರ್ಚ್ 20 ರವರೆಗೆ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ಮುಚ್ಚಲು ಸುಪ್ರೀಂ ಸಮಿತಿ ನಿರ್ಧರಿಸಿದೆ.
ಮೇಲೆ ತಿಳಿಸಿದ ಲಾಡ್ ಡೌನ್ ಪೆಟ್ರೋಲ್ ಕೇಂದ್ರಗಳು, ಆರೋಗ್ಯ ಕೇಂದ್ರಗಳು ಮತ್ತು ಖಾಸಗಿ ಔಷಧಾಲಯಗಳು ಎಂದಿನಂತೆ ತೆರೆದಿರುತ್ತದೆ. ದಿನಬಳಕೆ ಸಾಮಾನುಗಳು ಜೊತೆಗೆ ರೆಸ್ಟೋರೆಂಟ್ ಮತ್ತು ಕೆಫೆಗಳು ಕೂಡ ಬಂದಾಗಿರುತ್ತದೆ.
ಮಾರ್ಚ್ 7 ರ ಭಾನುವಾರದಿಂದ ಮಾರ್ಚ್ 11 ರ ಗುರುವಾರದವರೆಗೆ ಸಾರ್ವಜನಿಕ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳನ್ನು ದೂರಶಿಕ್ಷಣದ ಮೂಲಕ ಮುಂದುವರಿಸಲು ಸಮಿತಿಯು ಅನುಮೋದನೆ ನೀಡಿದೆ, ಈ ಅವಧಿಯಲ್ಲಿ, ಸಾಂಕ್ರಾಮಿಕ ರೋಗದ ಪರಿಸ್ಥಿತಿಯ ಬೆಳವಣಿಗೆಗಳಿಗೆ ಅನುಗುಣವಾಗಿ ಇದನ್ನು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಸುಪ್ರೀಂ ಕಮಿಟಿ ನಿರ್ಧರಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.