ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): ಕ್ಯಾಪಿಟಲ್ ಕ್ಲಬ್ ಎಲಿಮಲೆ, ಜೀರ್ಮುಕ್ಕಿ ಇದರ ಆಶ್ರಯದಲ್ಲಿ ಲೀಗ್ ಮಾದರಿಯ 5 ಗಜಗಳ ಕ್ರಿಕೆಟ್ ಪಂದ್ಯಾಟ ಸರಕಾರಿ ಪ್ರೌಢ ಶಾಲೆ ಎಲಿಮಲೆಯ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಇಂಡಿಯನ್ ಸ್ಟ್ರೈಕರ್ಸ್ ತನ್ನದಾಗಿಕೊಂಡಿದ್ದು, ದ್ವಿತೀಯ ಸ್ಥಾನವನ್ನು ಯಂಗ್ ಟೈಗರ್ಸ್ ತನ್ನ ಮಡಿಲಿಗೇರಿಸಿತು. ವಿಜೇತರಿಗೆ ನಗದು ಹಾಗೂ ಶಾಶ್ವತ ಫಲಕವನ್ನು ನೀಡಿ ಗೌರವಿಸಲಾಯಿತು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಿದ್ದೀಕ್ ಜಿ.ಎಂ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು ಅವರು ಉಧ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ವಂದನಾ ಹೊಸತೋಟ, ವೇಣುಗೋಪಾಲ ಪುನ್ಕುಟ್ಟಿ, ಪ್ರೌಢಶಾಲಾ ಅಧ್ಯಾಪಕರಾದ ಮುರಳೀದರ ಪುನ್ಕುಟ್ಟಿ, ಶಿವಾಜಿ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಕಿಶನ್ ಮಾವಿನಕಟ್ಟೆ, ಮಿತ್ರ ಬಳಗ ಎಲಿಮಲೆ ಇದರ ಅಧ್ಯಕ್ಷರಾದ ಓಂ ಪ್ರಕಾಶ್ ಕಜೆ, ಸ್ನೇಹ ಯುವ ಬಳಗ. ಇದರ ಅಧ್ಯಕ್ಷರಾದ ಜಯಂತ ತಳೂರು, ಸಿಟಿ ಸೆಂಟರ್ ಪಂಜ ಇದರ ಮಾಃಲಕರಾದ ಸೂಫಿ ಎಲಿಮಲೆ, KVG – NMC ಇಲ್ಲಿನ ಉಪನ್ಯಾಸಕರಾದ ಹರೀಶ್ ಭಟ್ ಚಳ್ಳ ಹಾಗೂ ಊರ ಮಹನೀಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.