ವಿಟ್ಲ (ವಿಶ್ವಕನ್ನಡಿಗ ನ್ಯೂಸ್): KFC ಹೆಲ್ಪ್ ಲೈನ್ (ರಿ) ಖಂಡಿಗ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 14-03-2021 ರಂದು KFC ಹೆಲ್ಪ್ ಲೈನ್ ಕಛೇರಿಯಲ್ಲಿ ಯಶಸ್ವಿಯಾಗಿ ನಡೆಯಿತು.ಇಬ್ರಾಹಿಂ ಖಲೀಲ್ ಅವರು ನೆರದವರನ್ನು ಸ್ವಾಗತಿಸಿದರು.ಸಲ್ಮಾನ್ ಫಾರಿಸ್ ಖಂಡಿಗ ಅವರು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಹನೀಫ್ ಖಂಡಿಗ, ಗೌರವಾಧ್ಯಕ್ಷರಾಗಿ ನೂರ್ ಮೊಹಮ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಖಲೀಲ್, ಕೋಶಾಧಿಕಾರಿಯಾಗಿ ಶಾಕಿರ್ ಖಂಡಿಗ, ಉಪಾಧ್ಯಕ್ಷರಾಗಿ ನಿಝಾಮುದ್ದೀನ್ ಹಾಗೂ ಹಾರಿಸ್ ಎನ್.ಎಮ್, ಜೊತೆ ಕಾರ್ಯದರ್ಶಿಗಳಾಗಿ ಝುಬೈರ್ ಹಾಗೂ ರಿಯಾಝ್, ಸಂಘಟನಾ ಕಾರ್ಯದರ್ಶಿಗಳಾಗಿ ಸಿಲ್ಮಿ, ಇರ್ಫಾನ್ ಹಾಗೂ ಇಕ್ಬಾಲ್ ಖಂಡಿಗ, ಸಂಘಟಕರಾಗಿ ಇರ್ಷಾದ್, ಫಹಾಮಿ ಹಾಗೂ ಇಕ್ಬಾಲ್ ಕೆಪಿ, ಸಲಹೆಗಾರರಾಗಿ ಅಬ್ದುಲ್ ಲತೀಫ್ ಬಡಕೋಡಿ, ಶಕೂರ್ ಹಾಜಿ, ರಝಾಕ್ ನೀರ್ಕಜೆ ಹಾಗೂ ಇಸ್ಮಾಯಿಲ್ ಬಿ.ಎಮ್, ಗಲ್ಫ್ ಸಂಯೋಜಕರಾಗಿ ಸಿರಾಜ್, ನಾಸಿರ್, ಅಲ್ ಮಿನ್ನಾ ಹಾಗೂ ಶಬೀರ್ ಖಂಡಿಗ ಆಯ್ಕೆಯಾದರು.ಝುಬೈರ್ ಖಂಡಿಗ ಧನ್ಯವಾದಗೈದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.