ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಫ್ರೆಂಡ್ಸ್ ಕ್ಲಬ್ (ಎನ್.ಎಫ್.ಸಿ) ಇದರ ಆಶ್ರಯದಲ್ಲಿ ದ.ಕ. ಜಿಲ್ಲೆ ಮತ್ತು ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಸಹಕಾರದೊಂದಿಗೆ ಎಪ್ರಿಲ್ 11 ರಂದು ಜರಗಲಿರುವ ಜಿಲ್ಲಾ ಮಟ್ಟದ ಗ್ರಾಮ ಸೀಮಿತ ತಂಡಗಳ ಕಬಡ್ಡಿ ಪಂದ್ಯಾಟ, ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನೇರಳಕಟ್ಟೆಯ ಡಿ.ಕೆ. ಸ್ವಾಮಿ ಶ್ರದ್ದಾ ಕೇಂದ್ರದ ಆವರಣದಲ್ಲಿ ನಡೆಯಿತು.
ಡಿ.ಕೆ. ಸ್ವಾಮೀಜಿ ನೇರಳಕಟ್ಟೆ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭ ಎನ್.ಎಫ್.ಸಿ. ಅಧ್ಯಕ್ಷ ಲತೀಫ್ ನೇರಳಕಟ್ಟೆ, ಉಪಾದ್ಯಕ್ಷರಾದ ಮಜೀದ್ ಮಾಣಿ, ರಝಾಕ್ ಸಾಹೇಬ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪೆರಾಜೆ, ಪದಾಧಿಕಾರಿಗಳಾದ ಅಥಾವುಲ್ಲಾ ನೇರಳಕಟ್ಟೆ, ಬದ್ರುದ್ದೀನ್ ನೇರಳಕಟ್ಟೆ, ಇಸ್ಮಾಯಿಲ್ ಎನ್.ಎಚ್. ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.