ದುಬೈ(www.Vknews.in): ಭಾರತದಲ್ಲಿ ರೂಪಾಂತರ ಕೊವಿಡ್ ಪ್ರಕರಣಗಳು ಭಾರಿ ಏರಿಕೆಯ ಮಧ್ಯೆ ಯುಎಇಯು ಭಾರತೀಯರಿಗೆ ರಾಷ್ಟ್ರಕ್ಕೆ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಏಪ್ರಿಲ್ 25 ರಿಂದ ರಾಷ್ಟ್ರಕ್ಕೆ ಬರುವ ಭಾರತೀಯರಿಗೆ ಪ್ರಯಾಣ ನಿಷೇಧವನ್ನು ಯುಎಇ ಪ್ರಕಟಿಸಿದ್ದು, ಏಪ್ರಿಲ್ 24, ಶನಿವಾರ ರಾತ್ರಿ ಸಮಯ 11:59 ರಿಂದ ಈ ನಿಷೇಧವು ಜಾರಿಗೆ ಬರಲಿದ್ದು, ಮೇ 4 ರವರೆಗೆ ಪ್ರಯಾಣ ನಿಷೇಧವು ಚಾಲ್ತಿಯಲ್ಲಿರುತ್ತದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ನಿಷೇಧವು ಏಪ್ರಿಲ್ 24, ಶನಿವಾರ ರಾತ್ರಿ 11:59 ರಿಂದ ಮೇ 4 ರ ವರೆಗೆ ಜಾರಿಯಲ್ಲಿದ್ದು, ಈ ಅವಧಿಯ ನಂತರ ನಿಷೇಧ ತೆರವು ಕುರಿತು ಪರಿಶೀಲಿಸಲಾಗುವುದು ಮತ್ತು ಅಗತ್ಯ ಕಂಡುಬಂದಲ್ಲಿ ನಿಷೇಧವನ್ನು ಮುಂದುವರಿಸಲಾಗುವುದೆಂದು ಆದೇಶದಲ್ಲಿ ತಿಳಿಸಲಾಗಿದೆ. ಹೊಸ ನಿಯಮದ ಪ್ರಕಾರ ಕಳೆದ 14 ದಿನಗಳಲ್ಲಿ ಭಾರತದಲ್ಲಿ ವಾಸ್ತವ್ಯದಲ್ಲಿದ್ದ ಪ್ರಯಾಣಿಕರಿಗೆ ಯುಎಇಗೆ ವಿಮಾನ ಹತ್ತಲು ಅನುಮತಿ ಇರುವುದಿಲ್ಲ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.