ಬೆಳ್ತಂಗಡಿ (www.vknews.com) : ತಾಲೂಕಿನ ಕಕ್ಕಿಂಜೆ ಎಂಬ ಪ್ರದೇಶದಲ್ಲಿ ನಾಲ್ಕು ವರ್ಷದ ಪುಟ್ಟ ಮಗುವನ್ನು ವಿಘ್ನೇಷ್ ಭಂಡಾರಿ ಎಂಬ ಕಾಮುಕನು ಲೈಂಗಿಕ ಕಿರುಕುಳವನ್ನು ಎಸಗಿದ್ದು ರಾತ್ರೋರಾತ್ರಿ ಬೆಳಕಿಗೆ ಬಂದಿದೆ. ಇದನ್ನು ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ತಾಲೂಕು ಸಮಿತಿಯು ಕಟು ಶಬ್ದಗಳಿಂದ ಖಂಡಿಸುತ್ತಿದೆ.
ಸೋಮವಾರ ಮಧ್ಯಾಹ್ನದ ವೇಳೆ 4 ವರ್ಷದ ಮಗು ತಾಯಿಯಲ್ಲಿ ಬಂದು ತನ್ನ ಮೇಲಾದ ದೌರ್ಜನ್ಯದ ಕುರಿತು ಹೇಳಿಕೊಂಡಿದ್ದಾಳೆ. ಆರೋಪಿ ವಿಘ್ನೇಷ್ ಭಂಡಾರಿ ಮೊಬೈಲಿನಲ್ಲಿ ಅಶ್ಲೀಲ ವೀಡಿಯೋಗಳನ್ನು ತೋರಿಸಿ ಮಗುವಿಗೆ ಕಿರುಕುಳ ನೀಡಿದ್ದಾನೆ. ಈ ಘಟನೆಯಿಂದಾಗಿ ಸಮಾಜವೇ ತಲೆ ತಗ್ಗಿಸುವಂತಾಗಿದೆ. ವಿಘ್ನೇಷ್ ಭಂಡಾರಿಯ ಈ ನೀಚ ಕೃತ್ಯ ಇದೇ ಮೊದಲೇನಲ್ಲ, ಸುಮಾರು ಮೂರು ವರ್ಷಗಳ ಹಿಂದೆಯೂ ಇಂತಹ ಪೈಶಾಚಿಕ ಕೃತ್ಯವನ್ನು ಎಸಗಿದ್ದನು, ಆ ಸಂದರ್ಭದಲ್ಲಿ ಕೇಸು ದಾಖಲಿಸಿದೆ ಪ್ರಕರಣವನ್ನು ಇತ್ಯರ್ಥಗೊಳಿಸಿದ ಕಾರಣದಿಂದಾಗಿಯೇ ಮತ್ತೊಂದು ದುಷ್ಕೃತ್ಯ ಇಂದು ಬೆಳಕಿಗೆ ಬಂದಿರುವುದು. ಇಂತಹ ಘಟನೆಗಳು ಮುಂದೆ ಮತ್ತೆ ಮರುಕಳಿಸಬಾರದು ಹಾಗೂ ಈ ಪ್ರಕಾರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ ನಲ್ಲಿ ತನಿಖೆಯನ್ನು ನಡೆಸಿ, ಶೀಘ್ರವಾಗಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆರೋಪಿಯನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಯಾಸಿನ್ ಬಂಗೇರಕಟ್ಟೆ ರವರು ಆಗ್ರಹಿಸಿದ್ದಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.