ಕೋಲಾರ(www.vkews.com) :- ಕೋವಿಡ್ -19 ಕಾಯಿಲೆಯ ಪತ್ತೆ ಹಚ್ಚುವುದಕ್ಕಾಗಿ ಹೆಚ್.ಆರ್.ಸಿ.ಟಿ ಮತ್ತು ಚೆಸ್ಟ್ ಎಕ್ಸರೇ ಪರೀಕ್ಷೆಗಾಗಿ ಖಾಸಗಿ ಸಿ.ಟಿ.ಸ್ಯಾನ್ ಕೇಂದ್ರಗಳು ಸರ್ಕಾರ ನಿಗಧಿಪಡಿಸಿದ ದರವನ್ನು ಪಡೆಯಬೇಕು .
ಹೆಚ್ಚು ಹಣವನ್ನು ಪಡೆದದ್ದಲ್ಲಿ ಸದರಿ ಆಸ್ಪತ್ರೆಗಳ ಮೇಲೆ ರಾಷ್ಟ್ರೀಯ ವಿಪತ್ತು ನಿಯಂತ್ರಣ ಕಾಯ್ದೆ ಮತ್ತು ಕೆ.ಪಿ.ಎಂ.ಇ ಕಾಯ್ದೆ 2007 ಮತ್ತು 2017 ರನ್ವಯ ಮತ್ತು ರಾಷ್ಟ್ರೀಯ ವಿಪತ್ತು ನಿಯಂತ್ರಣ ಕಾಯ್ದೆ 2005 ರಡಿ ಸೂಕ್ತ ಕ್ರಮ ಕೈಗೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಿಗೆ ಮತ್ತು ಕೋಲಾರದ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ರಾಜ್ಯ ಕ್ಷ – ಕಿರಣ ವಿಕಿರಣ ಸುರಕ್ಷತಾ ನಿರ್ದೇಶನಾಲಯದ ಉಪ ನಿರ್ದೇಶಕರಾದ ಡಾ || ರಾಜೇಶ್.ಕೆ.ಎಸ್ ಅವರು ತಿಳಿಸಿದ್ದಾರೆ .
ಕೋವಿಡ್ -19 ಸೋಂಕನ್ನು ಪತ್ತೆ ಹಚ್ಚುವುದಕ್ಕಾಗಿ ಹೆಚ್.ಆರ್.ಸಿ.ಟಿ ಸ್ಕ್ಯಾನ್ ಪರೀಕ್ಷೆಗಾಗಿ ಬಿ.ಪಿ.ಎಲ್ ಕಾರ್ಡ್ ಇರುವವರಿಗೆ ರೂ .1500 / – ಮತ್ತು ಇತರೆ ವರ್ಗದ ಜನರಿಗೆ ರೂ .2500 / – ಗಳನ್ನು ( ಎಲ್ಲಾ ಶುಲ್ಕಗಳು ಸೇರಿ ) ಹಾಗೂ ಚೆಸ್ಟ್ ಎಕ್ಸರೇ ಗೆ ರೂ .250 / – ಗಳನ್ನು ಮಾತ್ರ ಪಡೆಯಲು ಸರ್ಕಾರ ಆದೇಶಿಸಿದೆ ಎಂದು ಅವರು ತಿಳಿಸಿದ್ದಾರೆ . ಕೋವಿಡ್ -19 ಮಾರಣಾಂತಿಕ ಕಾಯಿಲೆಯಲ್ಲಿ ಖಾಸಗಿ ಸಿ.ಟಿ.ಸ್ಕ್ಯಾನ್ ಕೇಂದ್ರಗಳು ಸರ್ಕಾರ ನಿಗಧಿಪಡಿಸಿರುವ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಾನ್ಯ ನಿರ್ದೇಶಕರು , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು , ಬೆಂಗಳೂರು ಇವರ ಅನುಮತಿ ಮೇರೆಗೆ , ಸೇವಾ ಅಭಿಯಂತರರಾದ ಶಿವಕುಮಾರ , ಹಿರಿಯ ರೇಡಿಯಾಲಜಿಕಲ್ ಟೆಕ್ನಾಲಾಜಿಸ್ಟ್ ಎಂ.ಆರ್ . ರಾಮಚಂದ್ರರೆಡ್ಡಿ , ಪ್ರಭಾರ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳಾದ ಡಾ | ಕಮಲ ಮತ್ತು ರೇಡಿಯಾಲಜಿಕಲ್ ಟೆಕ್ನಾಲಾಜಿಸ್ಟ್ ರವರ ತಂಡದೊಂದಿಗೆ ಕೋಲಾರ ತಾಲ್ಲೂಕಿನಲ್ಲಿ ಚಕಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.