ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಭಾರತದ ಪ್ರತಿಷ್ಠಿತ ಫಿಷ್ ಮೀಲ್ ಇಂಡಸ್ಟ್ರೀ ಆಗಿರುವ, ಬ್ಲೂಲೈನ್ ಪುಡ್ ಪ್ರವೇಟ್ ಲಿಮಿಟೆಡ್ ಕಂಪೆನಿಯ ಕಾರ್ಮಿಕರಿಗೆ ಮತ್ತು ಕುಟುಂಬದ ಸದಸ್ಯರಿಗೆ ಕೊರೊನಾ ವ್ಯಾಕ್ಸಿನೇಶನ್ ಇಂದು ಮಾಡಲಾಯಿತು.
ಕಣಚೂರು ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಕಂಪೆನಿಯ ಪ್ರಾಯೋಜಕತ್ವದಲ್ಲಿ ನಡೆದ ಈ ವ್ಯಾಕ್ಸಿನೇಶನ್ ಕಾರ್ಮಿಕ ಹಿತರಕ್ಷಣೆಗೆ ಸಂಸ್ಥೆ ಕೈಗೊಂಡ ಪ್ರಯತ್ನವೆಂದು ಬ್ಲೂಲೈನ್ ಮಾಲಕರಾದ ಶೌಕತ್ತ್ ಶೌರಿ ಹೇಳಿದರು.
ಸಂಸ್ಥೆಯ ಸಿಬ್ಬಂದಿಗಳು, ಕಾರ್ಮಿಕರು ಮತ್ತು ಅವರ ಕುಟುಂಬಸ್ಥರು ಈ ವ್ಯಾಕ್ಸಿನೇಶನ್ ನ ಪ್ರಯೋಜನ ಪಡೆದರು. ವ್ಯಾಕ್ಸಿನೇಶನ್ ಮೂಲಕ ಕೋವಿಡ್ ನಿಂದ ಸುರಕ್ಷಿತವಾಗಲು ಮತ್ತು ಜನರಲ್ಲಿ ವ್ಯಾಕ್ಸಿನೇಶನ್ ಕುರಿತ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶೌಕತ್ತ್ ಶೌರಿ ಅಭಿಪ್ರಾಯ ತಿಳಿಸಿದರು. ಬ್ಲೂ ಲೈನ್ ಇಂಡಸ್ಟ್ರೀ ಪಿಷ್ ಮಿಲ್ ಪ್ರೋಡಕ್ಷನ್ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗೆ ಪಿಷ್ ಮೀಲ್ ಪ್ರೊಡಕ್ಟ್ ರಪ್ತು ಮಾಡುತ್ತದೆ.
ಈ ಮೂಲಕ ಮುನ್ನೂರಕ್ಕಿಂತ ಹೆಚ್ಚು ಕಾರ್ಮಿಕರಿಗೆ ಕೆಲಸ ನೀಡಿದೆ. ಲಾಕ್ ಡೌನ್ ಸಂದರ್ಭದಲ್ಲಿ ಕೆಲಸಗಾರರಿಗೆ ಪೂರ್ಣ ಸಂಬಳ ಮತ್ತು ಅವಶ್ಯಕ ನೆರವನ್ನು ನೀಡುತ್ತಾ ಕಾರ್ಮಿಕರ ಹಿತರಕ್ಷಣೆಯನ್ನು ಕಾಪಾಡುತ್ತಿದೆ. ಅವರ ವಾರ್ಷಿಕ ಬೋನಸ್ಸ್ ಅನ್ನು ನೀಡುತ್ತಾ ಕಾರ್ಮಿಕರ ಕುಟುಂಬಕ್ಕೆ ಬ್ಲೂ ಲೈನ್ ಸಂಸ್ಥೆ ಆಸರೆಯಾಗಿದೆ.
ಸಂಸ್ಥೆಯ ಪಾಲುದಾರರಾದ ಮಹಮ್ಮದ್ ಫಕೀರ್ ವ್ಯಾಕ್ಸಿನೇಶನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.