ಇಸ್ರೇಲ್(ವಿಶ್ವಕನ್ನಡಿಗ ನ್ಯೂಸ್):ಹದಿನಾಲ್ಕು ವರ್ಷಗಳ ಸುದೀರ್ಘ ಅಧಿಕಾರದ ಬಳಿಕ ಇಸ್ರೇಲ್ ನ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನ್ನೆಟ್ ಚುಕ್ಕಾಣಿ ಹಿಡಿದಿದ್ದಾರೆ.
ಆಡಳಿತ ಬದಲಾವಣೆ ಅವರ ಆಂತರಿಕ ವಿಚಾರ,ಯಾವುದೇ ಸರಕಾರ ಬಂದರೂ ಅಕ್ರಮ ವಲಸೆ ವಿಚಾರದಲ್ಲಿ ಮತ್ತು ಪ್ಯಾಲೇಸ್ತೀನಿ ಗಳ ಹಕ್ಕುಗಳ ವಿಚಾರದಲ್ಲಿ ಬದಲಾವಣೆಯನ್ನು ನಿರೀಕ್ಷಿಸುವುದಿಲ್ಲ,ಇಷ್ಟು ಶೀಘ್ರದಲ್ಲಿ ಅಧಿಕಾರ ಬದಲಾವಣೆ ಹೊಸತನವನ್ನು ತರಲಿದೆ ಎಂಬುದನ್ನು ಹೇಳುವುದು ಸರಿಯಾಗದು.ಏಕೆಂದರೆ ಈ ಹಿಂದಿನ ಸರಕಾರಕ್ಕೆ ಇವರ ನೀತಿಗಳಿಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ ಎಂದು ಪ್ಯಾಲೇಸ್ತೀನಿನ ವಿದೇಶಾಂಗ ಸಚಿವರು ತಿಳಿಸಿದ್ದಾರೆ.
ಸದ್ಯದ ಸರಕಾರವನ್ನ ನೋಡಿದರೆ ತಮ್ಮ ಝಿಯೊನಿಸ್ಟ್ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ ಇದು ವಲಸೆ ಇದು ವಸಾಹತುಶಾಹಿ ಪರಿಧಿಯಲ್ಲೇ ಇದೆ ನಮ್ಮ ಹಕ್ಕುಗಳಿಗಾಗಿ ನಮ್ಮ ಪ್ರತಿರೋಧವು ಮುಂದುವರೆಯುವುದು ಎಂದು ಹಮಾಸ್ ವಕ್ತಾರರಾದ ಫೌಜಿ ತಿಳಿಸಿದ್ದಾರೆ.
ಮೈತ್ರಿ ಮೂಲಕ ಅಧಿಕಾರ ವಹಿಸಿದ ಬೆನೆಟ್ ಗ್ರೇಟರ್ ಇಸ್ರೇಲ್ ನ ಪ್ರಬಲ ಪ್ರತಿಪಾದಕರು.ಎರಡು ವರ್ಷಗಳ ಕಾಲ ಅಧಿಕಾರ ನಡೆಸಲಿದ್ದು ಬಳಿಕ ಯಾರ್ ಲ್ಯಾಪಿಡ್ ರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.