ಶ್ರೀನಿವಾಸಪುರ (ವಿಶ್ವ ಕನ್ನಡಿಗ ನ್ಯೂಸ್) :- ರೈತರು , ಕಿಸಾನ್ ರೈಲು ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು . ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ಹೊರ ರಾಜ್ಯಗಳಿಗೆ ರವಾನಿಸುವುದರ ಮೂಲಕ ಒಳ್ಳೆ ಲಾಭ ಗಳಿಸಬೇಕು ಎಂದು ಸಂಸದ ಸದಸ್ಯ ಎಸ್.ಮುನಿಶಾಮಿ ಹೇಳಿದರು . ದೊಡ್ಡನತ್ತ ರೈಲು ನಿಲ್ದಾಣದಲ್ಲಿ ಶನಿವಾರ ಕಿಸಾನ್ ರೈಲು ಸೇವೆಗೆ ಚಾಲನೆ ನೀಡಿ ಮಾತನಾಡಿ ಕಿಸಾನ್ ರೈಲು ಸೇವೆ ಆರಂಭದೊಂದಿಗೆ ಈ ಭಾಗದ ರೈತರ ಬಹುದಿನಗಳ ಕನಸು ನನಸಾಗಿದೆ . ಬೇಡಿಕೆಗೆ ಅನುಗುಣವಾಗಿ ರೈತರ ರೈಲನ್ನು ಓಡಿಸಲಾಗುವುದು . ರೈತರು ತಮ್ಮ ಉತ್ಪನ್ನಗಳಿಗೆ ಹೊರ ರಾಜ್ಯಗಳಿಂದ ಬೇಡಿಕೆ ಪಡೆದುಕೊಂಡು ಶೇ .೫೦ ರ ರಿಯಾಯಿತಿ ದರದಲ್ಲಿ ಸಾಗಾಣಿಕೆ ಮಾಡಬಹುದಾಗಿದೆ ಎಂದು ಹೇಳಿದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.