ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಸುಲ್ತಾನತ್ ಓಫ್ ಒಮಾನಿನಲ್ಲಿ ಕೋವಿಡ್ ರೋಗಿಗಳು ಹಾಗೂ ಕೋವಿಡ್’ನಿಂದ ಮರಣ ಹೊಂದುವವರ ಸಂಖ್ಯೆಯು ಅಧಿಕವಾಗುತ್ತಿರುವುದರಿಂದ ಇದನ್ನು ನಿಯಂತ್ರಿಸುವ ಸಲುವಾಗಿ ಇದೀಗಾಗಲೇ ಚಾಲ್ತಿಯಲ್ಲಿರುವ ಲಾಕ್’ಡೌನ್ ಸಮಯವನ್ನು ಜುಲೈ 16 ಶುಕ್ರವಾರದಿಂದ ಸಂಜೆ ಸಮಯ 5 ಗಂಟೆಯಿಂದ ಬೆಳಿಗ್ಗೆ 4 ರವರೆಗೆ ವಿಸ್ತರಿಸಿ ಸುಪ್ರೀಂ ಸಮಿತಿ ಆದೇಶ ಹೊರಡಿಸಲಾಗಿದೆ.
ಜುಲೈ 31 ರವರೆಗೆ ಪ್ರತಿದಿನ ಸಂಜೆ 5 ರಿಂದ 4 ರವರೆಗೆ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಮತ್ತು ವ್ಯಕ್ತಿಗಳು ಮತ್ತು ವಾಹನಗಳ ಸಂಚಾರವನ್ನು ನಿಷೇಧಿಸಲಾಗುವುದು.
ಬಕ್ರೀದ್ ಹಬ್ಬದ ಮೂರು ರಜಾದಿನಗಳಲ್ಲಿ, ಎಲ್ಲಾ ವಾಣಿಜ್ಯ ಚಟುವಟಿಕೆಗಳು, ವಾಹನಗಳು ಮತ್ತು ವ್ಯಕ್ತಿಗಳ ಸಂಚಾರದ ಮೇಲೆ ಸಂಪೂರ್ಣ ನಿಷೇಧ ಜಾರಿ ಮಾಡಲಾಗಿದೆ ಎಂದು ಸುಪ್ರೀಂ ಕಮಿಟಿ ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.