ಜೆದ್ದಾ(www.vknews.in): ವಿಮಾನ ನಿಷೇಧದಿಂದಾಗಿ ಸೌದಿ ಅರೇಬಿಯಾಕ್ಕೆ ಮರಳಲು ಸಾಧ್ಯವಾಗದ ಸೌದಿ ವಲಸಿಗರಿಗೆ ಇಕಾಮಾ, ಮರು ಪ್ರವೇಶ ಮತ್ತು ವಿಸಿಟಿಂಗ್ ವೀಸಾಗಳನ್ನು ಉಚಿತವಾಗಿ ನವೀಕರಿಸಲು ಸೌದಿ ಅರೇಬಿಯಾದ ರಾಜ ಸಲ್ಮಾನ್ ಆದೇಶಿಸಿದ್ದಾರೆ.
ಇಕಾಮಾ, ಮರು ಪ್ರವೇಶ ವೀಸಾಗಳು ಮತ್ತು ವಿಸಿಟಿಂಗ್ ವೀಸಾಗಳನ್ನು ಆಗಸ್ಟ್ 31 ರವರೆಗೆ ಉಚಿತವಾಗಿ ನವೀಕರಿಸಲಾಗುವುದು ಹಾಗೂ ಈ ಸೇವೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಸಲ್ಮಾನ್ ರಾಜನ ಸೂಚನೆಯಂತೆ ವಿದೇಶಿಯರ ಇಕಾಮಾ, ಮರು ಪ್ರವೇಶ ಮತ್ತು ವೀಸಾಗಳನ್ನು ಉಚಿತವಾಗಿ ನವೀಕರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಸೌದಿ ಜಾವಜತ್ ಹೇಳಿದ್ದಾರೆ.
ಕಳೆದ ವರ್ಷ ಮಾರ್ಚ್ ಅಂತ್ಯದಿಂದ ಸೌದಿ ಅರೇಬಿಯಾದ ಹೊರಗೆ ಉಳಿದುಕೊಂಡಿರುವ ವಿದೇಶಿಯರಿಗೆ ಸೌದಿ ಸರ್ಕಾರವು ಇಕಾಮಾ, ಮರು ಪ್ರವೇಶ ಮತ್ತು ವಿಸಿಟಿಂಗ್ ವೀಸಾಗಳನ್ನು ಉಚಿತವಾಗಿ ನವೀಕರಿಸುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.