(ವಿಶ್ವ ಕನ್ನಡಿಗ ನ್ಯೂಸ್) : ಒಂದು ವರ್ಷ ಹನ್ನೊಂದು ತಿಂಗಳ ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾಳೆ.
ಪುಟಾಣಿಯ ಹೆಸರು ಚಾರ್ವಿಕಾ ವಿ, ತೊದಲು ಮಾತನಾಡುವ ವಯಸ್ಸಿನಲ್ಲೇ ಅಗಾಧ ಬುದ್ದಿ ಶಕ್ತಿಯಿಂದ ಅಚ್ಚರಿ ಮೂಡಿಸಿದ್ದಾಳೆ ಈ ಪೋರಿ. ಏನೇ ಕೇಳಿದರೂ ಪಟಪಟ ಅಂತ ಉತ್ತರ ಹೇಳುವ ಈ ಬಾಲಕಿಯ ಸಾಧನೆಯನ್ನು ಕಂಡು ಬಾಲಕಿಯ ಕುಟುಂಬದವರು ಸಂತಸದಲ್ಲಿದ್ದಾರೆ. ಇದೀಗ ಈ ಪುಟಾಣಿ ಪೋರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ದೊರಕಿದೆ.
ಈಕೆ ಮೂಲತಃ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದ ವಿಕಾಸ್ ಹಾಗು ಹರ್ಷಿತ ಶ್ರೀ ದಂಪತಿಗಳ ಪುತ್ರಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.