ನವದೆಹಲಿ(www.vknews.in):ಇತ್ತಿಚೆಗೆ ಇಂಡಿಯಾ ಟುಡೇ ನಡೆಸಿದ ‘ಮೂಡ್ ಆಫ್ ದಿ ನೇಷನ್’ (MOTN) ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯು ಜನವರಿಯಿಂದ ಆಗಸ್ಟ್ ವರೆಗೆ ತೀವ್ರವಾಗಿ ಕುಸಿದಿದೆ. ಸಮೀಕ್ಷೆಯಲ್ಲಿ ಕೋವಿಡ್ -19 ರ ವಿನಾಶಕಾರಿ ಎರಡನೇ ತರಂಗದ ನಿರ್ವಹಣೆಯ ಮೇಲೆ ಜನತೆಯು ತೀವೃ ಅಸಮಾಧಾನದ ಹೊರಹಾಕಿದ್ದಾರೆ.
ಸಮೀಕ್ಷೆಯಲ್ಲಿ ಜನತೆಯ ಮುಂದಿಟ್ಟ ‘ಭಾರತದ ಮುಂದಿನ ಪ್ರಧಾನಿಯಾಗಲು ಯಾರು ಸೂಕ್ತರು?’ ಎಂಬ ಪ್ರಶ್ನೆಗೆ ಕೇವಲ 24 ಪ್ರತಿಶತದಷ್ಟು ಜನರು ಮಾತ್ರ ಮೋದಿ ಹೆಸರು ಸೂಚಿಸಿದ್ದಾರೆೆ. ಕಳೆದ ವರ್ಷದ ಸಮೀಕ್ಷೆಯಲ್ಲಿ ಈ ಪ್ರಶ್ನೆಗೆ ಶೇಕಡಾ 66 ರಷ್ಟು ಜನರು ಮೋದಿಯನ್ನು ಬೆಂಬಲಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.