ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರಿನ ಕಲಾಸೇವಾ, ಅನಿಕೇತನ, ಹಾಗೂ ಕನ್ನಡ ವೈಭವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಶ್ವೇತನಾಗರಾಜ್ ಸಾರಥ್ಯದಲ್ಲಿನ “ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.)” ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಕೃಷ್ಣ ಜನ್ಮಾಷ್ಟಾಮಿ ಪ್ರಯುಕ್ತ ರಾಜ್ಯ ಮಟ್ಟದ “ರಾಧಾ-ಕೃಷ್ಣ ವೇಷಧಾರಿಯ-2021” ರ ವಾಟ್ಸಪ್ ಪೋಟೋ ಸ್ಪರ್ಧೆಗೆ ಭಾವಚಿತ್ರಗಳ ಆಹ್ವಾನವನ್ನು ಮಾಡಲಾಗಿದೆ.
ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.) ಹಾಗೂ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ತಮ್ಮ ಭರತನಾಟ್ಯ ಶಾಲೆಯಲ್ಲಿ ಮಾತನಾಡಿ “ಪ್ರತಿ ವರ್ಷದಂತೆ ನಾವು ಈ ವರ್ಷವೂ ಸಹ ಕೃಷ್ಣಜನ್ಮಾಷ್ಟಾಮಿ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದಲ್ಲಿ 0 ಯಿಂದ 10 ವರ್ಷದ ವಯಸ್ಸಿನ ವಿಭಾಗವಾರು ರಾಧೆ-ಕೃಷ್ಣ ವೇಷಧಾರಿ ಸ್ಪರ್ಧೆ ಏರ್ಪಡಿಸಿದ್ದು ಪುಟ್ಟ ಪುಟ್ಟ ಮಕ್ಕಳಲ್ಲಿನ ಅದ್ಬುತವಾದ ವೇಷಭೂಷಣ ನೋಡಲು, ಬಲು ಚೆಂದ ಇರುವ ಕಾರಣ ಹಾಗೂ ನಮ್ಮ ಹಿಂದೂ ಸಂಸ್ಕೃತಿಯ ಪ್ರತಿಬಿಂಬದ ಛಾಯೆಯನ್ನು ಪ್ರಸ್ತುತಪಡಿಸಲು, ಈ ಒಂದು ಕಾರ್ಯಕ್ರಮವನ್ನು ಈ ವರ್ಷವೂ ಆಯೋಜಿಸುತ್ತಿದ್ದು ಎಲ್ಲಾ ಪೋಷಕರು ತಮ್ಮ ಮುದ್ದು ಮಕ್ಕಳ ರಾಧೆ-ಕೃಷ್ಣ ವಾಟ್ಸಪ್ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಸ್ಪೂರ್ತಿ ತುಂಬಿ” ಎಂದರು.
ಇದೇ ಸಂದರ್ಭದಲ್ಲಿ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಪ್ರಧಾನ ಕಾರ್ಯದರ್ಶಿ, VKF ನ ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್ ಮಾತನಾಡಿ “ಭಗವಾನ್ ವಿಷ್ಣುವಿನ 8ನೇ ಅವತಾರವಾದ ಭಗವಾನ್ ಕೃಷ್ಣನ ಹಾಗೂ ರಾಧೆಯ ವೇಷಧಾರಿ ಸ್ಪರ್ಧೆಯನ್ನು ರಾಜ್ಯ ಮಟ್ಟದಲ್ಲಿ ಏರ್ಪಡಿಸಿದ್ದು, ಪೂರ್ಣ ಪ್ರಮಾಣದಲ್ಲಿ ಶುಲ್ಕ ವಿನಾಯಿತಿ ಮೂಲಕ ಎಲ್ಲಾರಿಗೂ ಮುಕ್ತ ಅವಕಾಶ ಕಲ್ಪಿಸಿ ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ಹೊರತರುವ ಪ್ರಯತ್ನಕ್ಕಾಗಿ ನಾವು ಈ ಸ್ಪರ್ಧೆ ಏರ್ಪಡಿಸಿದ್ದೀವಿ, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾರಿಗೂ ಅಭಿನಂದನಾ ಪತ್ರ ನೀಡುವ ಜೊತೆಗೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ, ದ್ವೀತಿಯ, ತೃತೀಯ ಬಹುಮಾನವಾಗಿ ಮೂರು ವಿಭಾಗವಾರು ನೀಡಲಾಗುವುದು, ದಿನಾಂಕ: 02-09-2021 ನೇ ಗುರುವಾರ ರಾತ್ರಿ 10 ರವರೆಗೆ ಈ ವಾಟ್ಸಪ್ ಸ್ಪರ್ಧೆಯಲ್ಲಿ ಭಾಗವಹಿಸಬಹುದು” ಎಂದರು.
ರಾಧೆ-ಕೃಷ್ಣ ವೇಷಧಾರಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವವರು, ತಮ್ಮ ಮಕ್ಕಳ ಭಾವಚಿತ್ರವನ್ನು (ಪೋಟೋ) ಶ್ರೀಮತಿ ಶ್ವೇತನಾಗರಾಜ್ 8277094649, ಲಕ್ಕೂರು ಎಂ.ನಾಗರಾಜ್ 9900538954 ಇವರ ಈ ಮೊಬೈಲ್ ಸಂಖ್ಯೆಗೆ ತಾವು ಕಳುಹಿಸುವ ಮೂಲಕ ಭಾಗವಹಿಸಬಹುದು.
ಈ ಸಂದರ್ಭದಲ್ಲಿ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್, VKF ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್, ಸಂಚಾಲಕ ದೊಡ್ಡಕಲ್ಲಹಳ್ಳಿ ಮಂಜುನಾಥ್ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.