ದುಬೈ(www.vknews.in): ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಅನುಮೋದಿಸಿದ ಕೋವಿಡ್ -19 ಲಸಿಕೆಯ ಎರಡೂ ಡೋಸ್ಗಳನ್ನು ಪಡೆದ ಎಲ್ಲಾ ದೇಶದ ಪ್ರವಾಸಿಗರು ಯುಎಇಗೆ ಪ್ರಯಾಣಿಸಬಹುದಾಗಿದೆ. ಯುಎಇ ಪ್ರಯಾಣವನ್ನು ನಿರ್ಬಂಧಿಸಿರುವ ದೇಶಗಳ ಪ್ರವಾಸಿ ವೀಸಾ ಹೊಂದಿರುವವರಿಗೆ ಕೂಡ ಇದು ಅನ್ವಯಿಸುತ್ತದೆ ಎಂದು ಅಧಿಕಾರಿಗಳು ಶನಿವಾರ ಪ್ರಕಟಿಸಿದ್ದಾರೆ. ಹೊಸ ಆದೇಶವು ಆಗಸ್ಟ್ 30 ರಿಂದ ಅನ್ವಯವಾಗುತ್ತದೆ ಎಂದು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್ ಶಿಪ್ (ಐಸಿಎ) ಮತ್ತು ರಾಷ್ಟ್ರೀಯ ತುರ್ತುಸ್ಥಿತಿ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ ಸಿಇಎಂಎ) ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.