(www.vknews.com) : ಮದರಸಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆ ಪರಮತ ದ್ವೇಷದ ಪರಮಾವಧಿ ಸರ್ವ ಧರ್ಮವನ್ನು ಸಮವಾಗಿ ಕಾನು ನೆರೆಮನೆಯಾತ ಹಸಿದಿರುವಾಗ ಉಂಡು ಮಲಗುವವನು ನನ್ನವನಲ್ಲ ಎಂಬ ಪ್ರವಾದಿ ಸ.ಅ ರವರ ವಚನ ಕಲಿಸುವ ಕೇಂದ್ರವಾಗಿದೆ ಮದರಸ.
ಬೆಳೆದು ಬರುತ್ತಿರುವ ಮುಸ್ಲಿಂ ಮಕ್ಕಳಿಗೆ ಇಸ್ಲಾಂ ಧರ್ಮದ ಬಾಲಪಾಠ ಹೇಳಿಕೊಟ್ಟು ಅವರನ್ನು ಧರ್ಮಾಧರಿತ ಮತ್ತು ಶಾಂತಿ,ಸೌಹಾರ್ದತೆ ಸಹಬಾಳ್ವೆ ನಡೆಸಲು ಕಲಿಸಿ ಅಪ್ರತಿಮ ದೇಶಪ್ರೇಮಿಗಳನ್ನಾಗಿ ಮಾರ್ಪಡಿಸುವ ದೇಶದ ಶಾಂತಿಕೇಂದ್ರ ಗಳಾದ ಮದ್ರಸಗಳು ಮಾನವೀಯ ಮೌಲ್ಯಗಳನ್ನು ತಿಳಿಯಪಡಿಸುದಾಗೆದೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ಜನಪ್ರತಿನಿಧಿಯೂ ಆಗಿರುವ ಸಿ.ಟಿ.ರವಿ ಯವರಿಂದ ಇಂಥಾ ಮಾತುಗಳು ಬರಬಾರದು. ಇದನ್ನು ಕರ್ನಾಟಕ ರಾಜ್ಯ ಮದರಸ ಮೇನೇಜ್ ಮೆಂಟ್ ಅಸೋಶಿಯೇಶನ್ ಎಸ್ ಎಮ್ ಎ ತೀವ್ರವಾಗಿ ಖಂಡಿಸುತ್ತೇವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.