ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಇಲ್ಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಅನ್ಸಾರಿಯಾ ಎಜುಕೇಶನ್ ಸೆಂಟರ್ ಇದರ ಅಧೀನ ಸಂಸ್ಥೆಯಾದ ಅನ್ಸಾರಿಯಾ ದಅವಾ ಕಾಲೇಜಿನ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಾಗಿ ಹಮ್ಮಿಕೊಂಡ SKILL UP WORK SHOP 2K21 ಎಂಬ ಹತ್ತು ದಿನಗಳ ವಿನೂತನ ಕಾರ್ಯಕ್ರಮವು ಯಶಸ್ವಿಯಾಗಿ ಸಮಾಪ್ತಿಯಾಯಿತು.
ಸಮಾರೋಪ ಸಮಾರಂಭವು ದಿನಾಂಕ 01-09-2021 ರಂದು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಪ್ರ.ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಸ್ಥೆಯ ದಅವಾ ಉಸ್ತುವಾರಿಯಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಗ್ರೀನ್ ವ್ಯೂವ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಅಬ್ದುಲ್ ರಹೀಮ್ ಮಾಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉತ್ತಮ ರೀತಿಯಲ್ಲಿ ಮಾತನಾಡಿ ವಿದ್ಯಾರ್ಥಿಗಳಿಗೆ ವಿದ್ಯೆಯ ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದರು.
ಸಂಸ್ಥೆಯ ವ್ಯವಸ್ಥಾಪಕರಾದ ಮುಹಮ್ಮದ್ ಉವೈಸ್ ಬೀಟಿಗೆ ದಅವಾ ಕಾಲೇಜ್ ಪ್ರಾಂಶುಪಾಲರಾದ ಅಬೂಬಕರ್ ಹಿಮಮಿ ಸಖಾಫಿ ವಿಟ್ಲ,ಶರೀಅತ್ ಕಾಲೇಜು ಪ್ರಾಂಶುಪಾಲರಾದ ಶೌಕತ್ ಅಲಿ ಅಮಾನಿ , ದಅವಾ ಕಾಲೇಜು ಅಧ್ಯಾಪಕರಾದ ನೌಷಾದ್ ಮದನಿ , ಹಂಝತುಲ್ ಕರ್ರಾರ್ ಮುಈನಿ ಸಖಾಫಿ, ಸಿದ್ದೀಖ್ ಮಾಸ್ಟರ್ ಆಡಳಿತ ಸಮಿತಿ ನಿರ್ದೇಶಕರಾದ ಹಾಜಿ ಅಬ್ದುಲ್ ಖಾದರ್ ಪಟೇಲ್,ಹಾಜಿ ಕೆ.ಎಚ್ ಅಬ್ದುಲ್ ಶುಕೂರ್ ದಅವಾ ಕಾಲೇಜ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಅವಾ ಕಾಲೇಜು ಅಧ್ಯಾಪಕರಾದ ಝುಬೈರ್ ಹಿಮಮಿ ಪರಪ್ಪು ಸ್ವಾಗತಿಸಿ ,ನಿರೂಪಣೆ ಮಾಡಿದರು. ಕೊನೆಯಲ್ಲಿ ದ ಅ ವಾ ವಿದ್ಯಾರ್ಥಿ ಮುಹಮ್ಮದ್ ಇಲ್ಯಾಸ್ ಬೆಟ್ಟಂಪಾಡಿ ಧನ್ಯವಾದಗೈದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.