ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):ಮಾಲೂರು ತಾಲ್ಲೂಕಿನ ಚೆವ್ವೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ 4 ಗಂಟೆ ಸಮಯದಲ್ಲಿ ಸರ್ಕಾರಿ ಊರ್ದು ಹಿರಿಯ ಪ್ರಾಥಮಿಕ ಶಾಲೆಯ ಕಲ್ಲಿನ ಕಟ್ಟಡ ಕುಸಿದು ಬಿದ್ದಿದ್ದು, ಭಾರಿ ಅನಾಹುತ ತಪ್ಪಿದೆ.
ಈ ಶಾಲಾ ಕಟ್ಟಡ ಶಿಥಿಲಗೊಂಡಿದ್ದ ಶಾಲಾ ಮಕ್ಕಳಿಲ್ಲದ ವೇಳೆ ಕುಸಿದಿದ್ದು, ಅದೃಷ್ಟವಶಾತ್ 35 ಕ್ಕೂ ಹೆಚ್ಚು ಮಕ್ಕಳ ಜೀವ ಉಳಿದಿದೆ. ಭೋದನೆ ಮಾಡುವ ಅವಧಿಯಲ್ಲಿ ಕುಸಿದಿದ್ದರೆ ದೊಡ್ಡ ಅನಾಹುತವೇ ಸಂಭವಿಸಿರುತ್ತಿತ್ತು ಎಂದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
1 ರಿಂದ 7 ನೇ ತರಗತಿಯವರೆಗೂ ಈ ಶಾಲೆಯಲ್ಲಿ ಸರಿ ಸುಮಾರು 35 ಮಂದಿ ಕಲಿಯುತ್ತಿದ್ದರು. ಅನೇಕ ಚುನಾವಣಾ ಕಾರ್ಯಗಳಿಗೂ ಸಹ ಕುಸಿದು ಬಿದಿದ್ದ ಕಲ್ಲಿನ ಕಟ್ಟಡದಲ್ಲಿಯೇ ನಡೆಯುತ್ತಿತ್ತು ಎನ್ನುತ್ತಾರೆ ಗ್ರಾಮದ ಯುವಕರ ತಂಡ.
ಕುಸಿದು ಬಿದ್ದ ಕಲ್ಲಿನ ಕಟ್ಟಡದ ಶಾಲೆಯನ್ನು ವೀಕ್ಷಿಸಲು ತಕ್ಷಣವೇ ಬಾರದ ಮುಖ್ಯೋಪಾಧ್ಯಾಯರು, ಜನಪ್ರತಿನಿಧಿಗಳು, ತಡವಾಗಿ 11 ಗಂಟೆಯ ಸಮಯದಲ್ಲಿ ನಾಮಕವಾಸ್ತೆ ಎಂಬಂತೆ ಬಂದು ವೀಕ್ಷಣೆ ಮಾಡಿರುವುದು ಬೆಳಕಿಗೆ ಬಂದಿದೆ.
ಸರ್ಕಾರಿ ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ ನಗೀನ್ ತಾಜ್ ರವರು ಮಾತನಾಡಿ “ಶಿಥಿಲವ್ಯವಸ್ಥೆಯಲ್ಲಿದ್ದ ಕಟ್ಟಡ ಮಳೆ ಬಂದ ಕಾರಣ ಕಲ್ಲಿನ ಕಟ್ಟಡ ಕುಸಿದಿದೆ, ಅದನ್ನು ನಾವು ಬಳಕೆ ಮಾಡುತ್ತಿರಲಿಲ್ಲ, ಮಕ್ಕಳು ಸಹ ಇರಲಿಲ್ಲ ಏನೂ ಅನಾಹುತಾ ಆಗಿಲ್ಲ, ಎಂಬ ಹಾರಿಕೆಯ” ಉತ್ತರ ನೀಡಿದ್ದಾರೆ.
ಈ ಬಗ್ಗೆ ಸ್ಥಳ ಪರಿಶೀಲನೆಯನ್ನು ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಮಾಡಿದ್ದಾರೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.