(www.vknews.com) : “ಬ್ಯಾರಿ ಎಲ್ತ್ಗಾರ್ತಿಮಾರೊ ಕೂಟ” ಈ ವಾಟ್ಸಪ್ ಬಳಗವು ಆಯಿಷಾ ಯು.ಕೆ, ಝುಲೇಕ ಮುಮ್ತಾಝ್ ಹಾಗೂ ಹಫ್ಸಾ ಬಾನು ಬೆಂಗಳೂರು ಇವರ ನಿರ್ವಹಣೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಬ್ಯಾರಿ ಲೇಖಕಿಯರನ್ನು ಒಟ್ಟು ಸೇರಿಸಿ ಸಕ್ರಿಯವಾಗಿದೆ. ‘ಕನ್ನಡ, ಬ್ಯಾರಿ ಹಾಗೂ ಇನ್ನಿತರ ಭಾಷೆಗಳಲ್ಲಿ ಬರವಣಿಗೆಯನ್ನು ತೊಡಗಿಸಿಕೊಂಡ ಅನೇಕ ಉದಯೋನ್ಮುಖ ಲೇಖಕಿಯರೂ, ಪ್ರಬುದ್ಧ ಸಾಧಕ ಸಾಹಿತಿಯರೂ ಈ ಬಳಗದಲ್ಲಿದ್ದಾರೆ.
ಇದೀಗ ಈ ಬಳಗದ ವತಿಯಿಂದ ಸಾಹಿತ್ಯಾಸಕ್ತ ಮಹಿಳೆಯರಿಗಾಗಿ “ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಸರಕಾರದ ನ್ಯಾಯ ನೀತಿಗಳು” ಎಂಬ ವಿಷಯದಲ್ಲಿ ಕನ್ನಡ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಫರ್ಧೆಯ ಮುಂದಾಳತ್ವವನ್ನು ಈ ಬಳಗದ ನಿರ್ವಾಹಕರ ಜತೆಗೆ ಪ್ರಬುದ್ಧ ಲೇಖಕಿಯರಾದ ಶಮೀಮ ಕುತ್ತಾರ್, ಮಿಸ್ರಿಯಾ ಐ ಪಜೀರ್, ಫಾತಿಮ ರಲಿಯಾ ಮತ್ತು ಆಸಿಫಾ ಇಮ್ರಾನ್ ಇವರುಗಳು ವಹಿಸಿಕೊಂಡಿರುವರು.
ಸ್ಪರ್ಧೆಯ ವಿವರಣೆ:-
ವಿಷಯ:- ”ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಸರಕಾರದ ನ್ಯಾಯ ನೀತಿಗಳು”
ಹದಿನೆಂಟು ವರುಷ ಮೇಲ್ಪಟ್ಟ ಮಹಿಳೆಯರು ಮಾತ್ರ ಭಾಗವಹಿಸಬಹುದು ಆಸಕ್ತರು ತಮ್ಮ ಲೇಖನವನ್ನು ಮೊಬೈಲ್ನಲ್ಲಿ ಟೈಪಿಸಿ ನಮ್ಮ ಬಳಗದ ಮೊಬೈಲ್ ಸಂಖ್ಯೆಗೆ ಸೆಪ್ಟೆಂಬರ್ 20ರ ಒಳಗಾಗಿ ವಾಟ್ಸಾಪ್ ಮುಖಾಂತರ ಕಳುಹಿಸ ತಕ್ಕದ್ದು ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪುಸ್ತಕಗಳು ಹಾಗೂ ಸ್ಮರಣಿಕೆಯ ರೂಪದಲ್ಲಿ ನೀಡಲಾಗುವುದು.
ಸ್ಪರ್ಧೆಯ ನಿಯಮಗಳು:- 1. ಲೇಖನವು 1000 ಪದಗಳ ಮಿತಿಯೊಳಗಿರಲಿ. 2. ಹಾಳೆಯಲ್ಲಿ ಬರೆದು ಫೋಟೋ ತೆಗೆದು ಕಳುಹಿಸಿದ ಬರಹವನ್ನು ಸ್ವೀಕರಿಸಲಾಗುವುದಿಲ್ಲ. 3. ಸಪ್ಟೆಂಬರ್ 20 ರ ನಂತರ ಬಂದ ಲೇಖನಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. 4. ಮೇಲೆ ಕೊಟ್ಟ ವಿಷಯದ ಮೇಲೆ ಲೇಖನ ಬರೆದು ಸೂಕ್ತ ಶೀರ್ಷಿಕೆ ನೀಡತಕ್ಕದ್ದು. ಕೊನೆಯಲ್ಲಿ ತಮ್ಮ ಹೆಸರು , ಊರು , ಮೊಬೈಲ್ ನಂಬರನ್ನು ಕಡ್ಡಾಯವಾಗಿ ನಮೂದಿಸಿರ ಬೇಕು.
ಲೇಖನ ಕಳುಹಿಸ ಬೇಕಾದ ಮೊಬೈಲ್ ಸಂಖ್ಯೆ : 9481035329
ಹೆಚ್ಚಿನ ಮಾಹಿತಿಗಾಗಿ:- [email protected]
“ತೀರ್ಪುಗಾರರ ತೀರ್ಮಾನವೇ ಅಂತಿಮ” ಆಸಕ್ತ ಮಹಿಳೆಯರು ಇದರ ಪ್ರಯೋಜನವನ್ನು ಪಡೆದು ಕೊಳ್ಳ ಬೇಕೆಂದು
ಬ್ಯಾರಿ ಎಲ್ತ್ಗಾರ್ತಿಮಾರೊ ಕೂಟ. (ಬ್ಯಾರಿ ಬರಹಗಾರ್ತಿಯರ ಕೂಟ) ಸ್ಪರ್ಧಾ ಮಂಡಳಿಯಿಂದ ಕರೆ ನೀಡಿರುತ್ತಾರೆ.
ವರದಿ : ಹಫ್ಸಾ ಬಾನು ಬೆಂಗಳೂರು
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.