ಕೇಪ್ ಟೌನ್(www.vknews.in): ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ‘ತನಗಿಂತ ವಯಸ್ಸಾದಂತೆ ಕಾಣುವ’ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ. 20 ವರ್ಷದ ಮಾನಸಿಕ ವಿಕಲಚೇತನ ತಾಯಿ ದಕ್ಷಿಣ ಆಫ್ರಿಕಾದ ಪೂರ್ವ ಕೇಪ್ ಪ್ರಾಂತ್ಯದಲ್ಲಿರು ತನ್ನ ಮನೆಯಲ್ಲಿ ಈ ಅಪರೂಪದ ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಅತ್ಯಂತ ಅಪರೂಪದ ಸ್ಥಿತಿಯೊಂದಿಗೆ ಜನಿಸಿತು. ನವಜಾತ ಹೆಣ್ಣು ಮಗು ಪ್ರೊಜೆರಿಯಾದಿಂದ ಬಳಲುತ್ತಿದೆ ಆದ್ದರಿಂದ ಮಗು ವಯಸ್ಸಾದ ಮಹಿಳೆಯಂತೆ ಕಾಣುತ್ತಿದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಇದು ಅತ್ಯಂತ ಅಪರೂಪದ ಆನುವಂಶಿಕ ಅಸ್ವಸ್ಥತೆಯಾಗಿದ್ದು ಅದು ಮಕ್ಕಳು ಬೇಗನೆ ವಯಸ್ಸಾಗುವಂತೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.