ದಮ್ಮಾಮ್(www.vknews.in): ಯಮನ್ ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ನಜ್ರಾನ್, ಜೀಝಾನ್ ಹಾಗೂ ಪ್ರಮುಖ ತೈಲ ಶೇಖರಣಾ ಘಟಕವಿರುವ ಕೈಗಾರಿಕಾ ನಗರಿ ದಮ್ಮಾಮ್ ಮೇಲೆಯೂ ಏಕಕಾಲಕ್ಕೆ ಕ್ಷಿಪಣಿ ದಾಳಿ ನಡೆಸಿದೆ. ದಮ್ಮಾಮ್ ಮೇಲೆ ಪ್ರಯೋಗಿಸಿದ ಕ್ಷಿಪಣಿಯು ತಮ್ಮ ಗುರಿ ತಲುಪುವುದಕ್ಕಿಂತ ಮೊದಲೇ ಸೌದಿ ರಕ್ಷಣಾ ಪಡೆಯು ಅವುಗಳನ್ನು ಹೊಡೆದುರುಳಿಸಿದರೂ, ಕಾರ್ಯಾಚರಣೆಯ ವೇಳೆ ಈರ್ವರಿಗೆ ಗಂಭೀರ ಗಾಯಗಳಾಗಿದ್ದು, 14 ಮನೆಗಳಿಗೆ ಹಾನಿಯುಂಟಾಗಿದೆ. ಕ್ಷಿಪಣಿ ಹೊಡೆದುರುಳಿಸಿದ ಶಬ್ಧಕ್ಕೆ ಇಡೀ ದಮ್ಮಾಮ್ ಜನತೆಯೇ ಬೆಚ್ಚಿಬಿದ್ದಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.