ಬಿಜೆಪಿ, ಎಸ್ಡಿಪಿಐ ಪಕ್ಷದ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್): ಇತ್ತೀಚೆಗೆ ಗೂಡಿನಬಳಿ ವಲಯ ಕಾಂಗ್ರೆಸ್ ವಾರ್ಡ್ 13 ಹಾಗೂ 14 ಕ್ಕೆ ನೂತನವಾಗಿ ಆಯ್ಕೆಯಾದ ನವ ಸಾರಥಿಗಳಿಗೆ ಬಂಟ್ವಾಳ ಮಾಜಿ ಶಾಸಕರು,ಸಚಿವರೂ ಆದ ರಮನಾಥ ರೈ ಅವರ ಗಣ್ಯ ಉಪಸ್ಥಿತಿಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಎಸ್ಡಿಪಿಐ, ಬಿಜೆಪಿ ಪಕ್ಷದಿಂದ ನಲ್ವತ್ತಕ್ಕೂ ಅಧಿಕ ಯುವ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡರು.ನೂತನವಾಗಿ ಸೇರ್ಪಡೆಗೊಂಡ ಸರ್ವರಿಗೂ ಶಾಲು ಹೊದಿಸಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ರಾಮನಾಥ ರೈ ಅವರು ಮಾತನಾಡಿ ಬಿಜೆಪಿ ಆಡಳಿತ ವೈಫಲ್ಯ ಮತ್ತು ಬಿಜೆಪಿ, ಎಸ್ಡಿಪಿಐ ಪಕ್ಷಗಳಲ್ಲಿನ ಕೋಮುವಾದಿ ಸಿದ್ದಾಂತದ ಬಗ್ಗೆ ಜನರಿಗೆ, ಯುವ ಪೀಳಿಗೆಗೆ ಅರಿವು ಮೂಡಿಸದಿದ್ದಲ್ಲಿ ಕೋಮುವಾದಿಗಳ ಬೆಳವಣಿಗೆ ದೇಶದ ಪ್ರಜಾಪ್ರಭುತ್ವವನ್ನು ಅಪಾಯಕಾರಿ ಸ್ಥಿತಿಗೆ ತಂದೊಡ್ಡಲಿದೆ ಎಂದು ವಿವರಿಸಿದರು.
ಪಕ್ಷ ಸಂಘಟಿಸಿ ಪಕ್ಷವನ್ನು ಬಲ ಪಡಿಸುವ ಬಗ್ಗೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಮಾಣಿ ಅವರು ಮಾತನಾಡಿ ನೂತನವಾಗಿ ಸೇರ್ಪಡೆಯಾದ ಇತರ ಪಕ್ಷಗಳ ಕಾರ್ಯಕರ್ತರಿಗೆ ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರಾದ ಅಬ್ಬಾಸ್ ಆಲಿ, ಲೋಲಾಕ್ಷ, ಮೊಹಮ್ಮದ್ ನಂದಾವರ, ಸ್ವಾಲಿಹ್, ಇಸ್ಮಾಯಿಲ್ ಹಾಗೂ ಯುವ ನಾಯಕರಾದ ನವಾಝ್ ಬಡಕಬೈಲು, ಅರ್ಶದ್ ಸರವು ಉಪಸ್ಥಿತರಿದ್ದರು.
ವಲಯ ಗೌರವಾಧ್ಯಕ್ಷರಾದ ಚಾಚಾ ಖಾದರ್, ವಲಯ ಅಧ್ಯಕ್ಷರಾದ ರಝಕ್ ಟಿ, ಬೂತ್ ಅಧ್ಯಕ್ಷರಾದ ಖಾಸಿಂ ಎಂಕೆ, ಸತ್ಯ ನಾರಾಯಣ್ ರಾವ್ ಹಾಗೂ ಪಧಾಧಿಕಾರಿಗಳಾದ ಫ್ರಾನ್ಸಿಸ್, ಹಸನಾಕ, ರಹೀಂ, ಅಲೀಂ, ಪ್ರದೀಪ್ ಕಿನ್ನಿ ಮತ್ತು ಸ್ಥಳೀಯ ಯುವ ಕಾಂಗ್ರೆಸ್ ನಾಯಕರಾದ ರಿಝ್ವಾನ್, ಅಮೀನ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಇಸ್ರಾರ್ ಗೂಡಿನಬಳಿ ಅವರು ಧನ್ಯವಾದಗೈದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
*ಗೂಡಿನಬಳಿ ವಲಯ ಕಾಂಗ್ರೆಸ್ ವಾರ್ಡ್ 13 ಹಾಗೂ 14ಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ*
▪️ಬಿಜೆಪಿ, ಎಸ್ಡಿಪಿಐ ಪಕ್ಷದ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
https://vknews.in/438143/
*VK NEWS* https://m.facebook.com/story.php?story_fbid=4260779247339130&id=227274760689619 ಗಾಳಕ್ಕೆ ಸಿಕ್ಕ ಮೀನಿನಂತೆ ಹಣಕ್ಕೆ ಬಾಯಿಬಿಟ್ಟು ಗಾಳಿಸುದ್ದಿ ಹರಡಿ vk news ಗೆ ಇದ್ದ ಅಲ್ಪ ಬೆಲೆ ಯನ್ನ ಕಳೆದುಕೊಳ್ಳದಿರಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.