ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಶಿಕ್ಷಕರ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸೆ.08 ರ ಬುಧವಾರ ಬೆಳಿಗ್ಗೆ 11 ಗಂಟೆಗೆ, ನಗರದ ವಿವೇಕ್ ಇನ್ಪೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಡಿ. ಕಿಶೋರ್ ಬಾಬು ಅವರು ಉದ್ಘಾಟಿಸಲಿದ್ದಾರೆ.
ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿರುವ ರೋಜ, ಕುಮಾರ್, ಜಗದೀಶ್, ಸಂತೋಷ್, ರಾಮು, ನಾಗೇಶ್ ಹಾಗೂ ಟಿ.ಇ.ಟಿ. ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಉಷಾ, ಅನಿತಾ, ಅಶ್ವಿನಿ, ಸೋನಿಯಾ, ಸಂಗೀತ, ಆಶಾ, ವನಜ ಮತ್ತು ಸುನೀಲ್ ಅವರನ್ನು ಅತ್ಮೀಯವಾಗಿ ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ. ಪ್ರಮೋದ್ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಜಿ. ಮುರಳಿ, ಉಪನ್ಯಾಸಕರಾದ ಧಾರವಾಡದ ಮಹಮದ್ ಇಲಿಯಾಸ್, ಎಸ್.ಆರ್.ರಾಕೇಶ್, ಕಿರಣ್ಕುಮಾರ್, ಆದಿ ವಿಜಯ ಗುಪ್ತ, ಎನ್.ಯು. ಸುಜಯ್, ಬಾನುಪ್ರಕಾಶ್, ದಾಮೋದರ ಗುಪ್ತ, ಚೈತ್ರ, ರಶ್ಮಿ ಸೇರಿದಂತೆ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರುವರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.