ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಗ್ರಾಮದ ಸರ್ಕಾರಿ ಫ್ರೌಡ ಶಾಲೆಯ ಚಿತ್ರಕಲಾ ಶಿಕ್ಷಕರಾದ ಗುಲ್ಜಾರ್ ರವರಿಗೆ ಕೋಲಾರ ಜಿಲ್ಲಾ ಮಟ್ಟದ “ಉತ್ತಮ ಶಿಕ್ಷಕ” ಪ್ರಶಸ್ತಿ ಪಡೆದಿದ್ದಕ್ಕಾಗಿ ಅಭಿನಂದನೆಗಳು ಹಾಗೂ ಸನ್ಮಾನಗಳ ಮಹಾಪೂರವೇ ಅರಿದುಬಂದಿದೆ.
ಇಂದು ಸರ್ಕಾರಿ ಫ್ರೌಡ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ವಿ ಗೋಪಿನಾಥ್ ರವರು ಮಾತನಾಡಿ “ನಮ್ಮ ಶಾಲೆಯಲ್ಲಿನ ಚಿತ್ರಕಲಾ ಶಿಕ್ಷಕರ ಕಾಳಜಿಯುತ ಶೈಕ್ಷಣಿಕ ಭೋದನೆ, 19 ವರ್ಷಗಳ ಸತತ ಪರಿಶ್ರಮದ ಸೇವೆಯ ಪ್ರತಿಫಲ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಇವರ ಉತ್ತಮ ಕಾರ್ಯವೈಖರಿ ನಮ್ಮ ಶಾಲೆಗೆ ಕೀರ್ತಿ ತರಲು ಸಾಧ್ಯವಾಗಿದೆ ಅವರಿಗೆ ಎಲ್ಲಾ ರೀತಿಯ ಸಹಕಾರವನ್ನು ನಾವು ಸದಾ ನೀಡಲು ಸಿದ್ದ” ಎಂದರು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಗಾಯಕರು, ಹಾಗೂ ಚಿತ್ರಕಲಾ ಶಿಕ್ಷಕರಾದ ಗುಲ್ಜಾರ್ ರವರು ಮಾತನಾಡಿ “19 ವರ್ಷಗಳಿಂದ ನಿರಂತರವಾಗಿ ಚಿತ್ರಕಲಾ ಶಿಕ್ಷಕನಾಗಿ ಹಾಗೂ ಶಾಲೆಯ ಸರ್ವ ರೀತಿಯ ಅಭಿವೃದ್ದಿಗಾಗಿ ಕರ್ತವ್ಯ ಮಾಡಿದ್ದೀನಿ, ಚಿತ್ರಕಲಾ ಶಿಕ್ಷಕನಾಗಿ ಮಕ್ಕಳನ್ನು ಚಿತ್ರಕಲೆಯತ್ತ ತಮ್ಮ ಗಮನ ಕೇಂದ್ರಿಕರಿಸುವ ಕಾರ್ಯವನ್ನು ಮಾಡಿ, ನನ್ನ ಕೆಲಸಗಳನ್ನು ನೀಡಿರುವ ಪ್ರಶಸ್ತಿ, ನನ್ನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ಕಡೆ ಗಮನ ನೀಡಲು ಪ್ರೇರಣೆ ನೀಡಿದೆ.ನನ್ನ ಕುಟುಂಬ, ಸಮುದಾಯ, ಮುಖಂಡರು, ಸಹೋದ್ಯೋಗಿ ಶಿಕ್ಷಕರು, ಎಸ್.ಡಿ.ಎಂ.ಸಿ ಎಲ್ಲಾರಿಗೂ ಅಭಿನಂದನೆ” ಎಂದರು.
ಕನ್ನಡ ಭಾಷಾ ಶಿಕ್ಷಕರಾದ ಗುಟ್ಟಪ್ಪನವರು ಮಾತನಾಡಿ “ನಮ್ಮ ಸಹದ್ಯೋಗಿ ಮಿತ್ರ ಗುಲ್ಜಾರ್ ರವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಅಭಿನಂದನೀಯ, ವೃತ್ತಿಯಲ್ಲಿ ದಕ್ಷತೆ, ಪ್ರಮಾಣಿಕತೆ, ಸರ್ವ ರೀತಿಯ ಅಭಿವೃದ್ದಿಗಾಗಿ ಸದಾ ಮಿಡಿಯುವ ಚಿತ್ರಕಲಾ ಮಾಂತ್ರಿಕನಿಗೆ, ಸೃಜನಶೀಲ ವ್ಯಕ್ತಿತ್ವದ ಶಿಕ್ಷಕರಿಗೆ ಪ್ರಶಸ್ತಿ ದಕ್ಕಿರುವುದು ಬಹಳ ಸಂತಸವಾಗಿದೆ” ಎಂದರು.
ಆಂಗ್ಲಭಾಷ ಶಿಕ್ಷಕರಾದ ರಾಧಮ್ಮ ಸಿ.ವೈ. ಇತರರು ಮಾತನಾಡಿದರು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಚಿತ್ರಕಲಾ ಶಿಕ್ಷಕರಿಗೆ ಅನೇಕ ಸನ್ಮಾನಗಳನ್ನು ಮಾಡಲಾಗಿದೆ. ಕೋಲಾರದ ಪ್ರಧಾನ ವೇದಿಕೆ, ಮಾಲೂರಿನ ಶಾಸಕರಾದ ಕೆ.ವೈ.ನಂಜೇಗೌಡ, ಸಮಾಜ ಸೇವಕ ಜಿ.ಇ.ರಾಮೇಗೌಡ ರವರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಗಣಿತ ಶಿಕ್ಷಕರಾದ ಶ್ರೀಮತಿ ಸೌಜನ್ಯ, ಶ್ರೀಮತಿ ಛಾಯದೇವಿ, ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀಮತಿ ಗಿರೀಜಾಮ್ಮ, ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.