ಮುಂಬೈ (www.vknews.com) : ಬಹುನಿರೀಕ್ಷಿತ ಜಿಯೋಫೋನ್ ನೆಕ್ಸ್ಟ್ ಅನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆಯೆಂದು ಜಿಯೋ ಮತ್ತು ಗೂಗಲ್ ಇಂದು ಘೋಷಿಸಿವೆ. ಭಾರತಕ್ಕಾಗಿಯೇ ತಯಾರಿಸಲಾದ ಈ ಸ್ಮಾರ್ಟ್ಫೋನ್ ಅನ್ನು ಇವೆರಡೂ ಸಂಸ್ಥೆಗಳು ಒಟ್ಟಾಗಿ ವಿನ್ಯಾಸಗೊಳಿಸಿವೆ.
ಜಿಯೋಫೋನ್ ನೆಕ್ಸ್ಟ್, ಆಂಡ್ರಾಯ್ಡ್ ಮತ್ತು ಪ್ಲೇ ಸ್ಟೋರ್ ಆಧಾರಿತ ಆಪ್ಟಿಮೈಸ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿರುವ ಆ ಬಗೆಯ ಮೊದಲ ಸಾಧನವಾಗಿದೆ. ಗ್ರಾಹಕರು ತಮ್ಮದೇ ಭಾಷೆಯಲ್ಲಿ ಮಾಹಿತಿ ಪಡೆಯಲು ಹಾಗೂ ಫೋನ್ ಬಳಸಲು ನೆರವಾಗುವ ವಾಯ್ಸ್-ಫಸ್ಟ್ ಫೀಚರ್ಗಳು, ಅತ್ಯುತ್ತಮ ಕ್ಯಾಮೆರಾ ಅನುಭವ, ಇತ್ತೀಚಿನ ಆಂಡ್ರಾಯ್ಡ್ ವೈಶಿಷ್ಟ್ಯಗಳು ಮತ್ತು ಸುರಕ್ಷತಾ ಅಪ್ಡೇಟ್ಗಳನ್ನು ಪಡೆಯುವ ಆಯ್ಕೆ ಸೇರಿದಂತೆ ಇದುವರೆಗೆ ಹೆಚ್ಚು ಶಕ್ತಿಯುತವಾದ ಸ್ಮಾರ್ಟ್ಫೋನ್ಗಳಲ್ಲಿ ಮಾತ್ರವೇ ಇರುತ್ತಿದ್ದ ಪ್ರೀಮಿಯಂ ಸಾಮರ್ಥ್ಯಗಳನ್ನು ಈ ಸಾಧನ ಹಾಗೂ ಆಪರೇಟಿಂಗ್ ಸಿಸ್ಟಮ್ಗಳೆರಡೂ ನೀಡಲಿವೆ.
ಮತ್ತಷ್ಟು ಪರಿಷ್ಕರಿಷ್ಕರಿಸುವ ಉದ್ದೇಶದಿಂದ ಎರಡೂ ಸಂಸ್ಥೆಗಳು ಜಿಯೋಫೋನ್ ನೆಕ್ಸ್ಟ್ ಅನ್ನು ಸೀಮಿತ ಬಳಕೆದಾರರೊಂದಿಗೆ ಪರೀಕ್ಷಿಸಲು ಪ್ರಾರಂಭಿಸಿವೆ ಹಾಗೂ ದೀಪಾವಳಿ ಹಬ್ಬದ ಸಮಯಕ್ಕೆ ಸರಿಯಾಗಿ ಅದನ್ನು ಹೆಚ್ಚು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಪ್ರಸ್ತುತ ಉದ್ಯಮದಾದ್ಯಂತ ವ್ಯಾಪಿಸಿರುವ ಜಾಗತಿಕ ಸೆಮಿಕಂಡಕ್ಟರ್ ಕೊರತೆಯ ತೀವ್ರತೆಯನ್ನು ಕಡಿಮೆಮಾಡುವುದಕ್ಕೂ ಈ ಹೆಚ್ಚುವರಿ ಸಮಯವು ಸಹಾಯ ಮಾಡಲಿದೆ.
ಜಿಯೋಫೋನ್ ನೆಕ್ಸ್ಟ್ ಅನ್ನು ಗೂಗಲ್ ಅಸಿಸ್ಟೆಂಟ್, ಯಾವುದೇ ಆನ್-ಸ್ಕ್ರೀನ್ ಪಠ್ಯಕ್ಕಾಗಿ ಸ್ವಯಂಚಾಲಿತ ಓದುವಿಕೆ ಮತ್ತು ಭಾಷಾ ಅನುವಾದ, ಭಾರತ ಕೇಂದ್ರಿತ ಫಿಲ್ಟರ್ಗಳಿರುವ ಸ್ಮಾರ್ಟ್ ಕ್ಯಾಮೆರಾ ಮತ್ತು ಇನ್ನೂ ಹೆಚ್ಚಿನ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿದೆ. ಲಕ್ಷಾಂತರ ಭಾರತೀಯರಿಗೆ, ಅದರಲ್ಲೂ ವಿಶೇಷವಾಗಿ ಮೊದಲ ಬಾರಿಗೆ ಅಂತರ್ಜಾಲವನ್ನು ಅನುಭವಿಸುವವರಿಗೆ, ಹೊಸ ಅವಕಾಶಗಳನ್ನು ಒದಗಿಸುವ ತಮ್ಮ ಉದ್ದೇಶಕ್ಕೆ ಎರಡೂ ಸಂಸ್ಥೆಗಳು ತಮ್ಮ ಬದ್ಧತೆಯನ್ನು ಮುಂದುವರಿಸಿವೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.