ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ತಪಾಸಣೆಗಳು ಪ್ರಬಲವಾಗಿ ಮುಂದುವರಿಯುತ್ತಿರುವುದರಿಂದ, ಕಾನೂನುಬದ್ಧವಾಗಿ ಕೆಲಸ ಮಾಡದ ಎಲ್ಲಾ ವಿದೇಶಿಯರು ತಮ್ಮ ಸ್ಥಿತಿಯನ್ನು ಸರಿಪಡಿಸಿಕೊಳ್ಳುವ ಸಮಯ ಬಂದಿದೆ. ಇತ್ತೀಚಿನ ದಿನಗಳಲ್ಲಿ, ವೃತ್ತಿಯ ಹೊರತಾಗಿ ಬೇರೆ ಉದ್ಯೋಗದಲ್ಲಿದ್ದ ಹಲವಾರು ಮನೆ ಚಾಲಕರನ್ನು ಬಂಧಿಸಿದ ಕುರಿತು ವರದಿಯಾಗಿದೆ.
ಇಖಾಮ(ವಾಸ್ತವ್ಯ ಪರವಾನಗಿ), ಕಾರ್ಮಿಕ ಮತ್ತು ಗಡಿ ಉಲ್ಲಂಘಿಸುವವರ ತಪಾಸಣೆ ದೇಶದ ವಿವಿಧ ಪ್ರಾಂತ್ಯಗಳಲ್ಲಿ ತೀವ್ರವಾಗಿ ಮುಂದುವರಿದಿದೆ. ಕಳೆದ ವಾರವೊಂದರಲ್ಲೇ, ಸೌದಿ ಅರೇಬಿಯಾದಲ್ಲಿ 17,598 ಇಕಾಮ, ಕಾರ್ಮಿಕ ಮತ್ತು ಗಡಿ ಉಲ್ಲಂಘಿಸುವವರನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ಕೇವಲ ಒಂದು ವಾರದಲ್ಲಿ ಬಂಧಿತರಲ್ಲಿ 6594 ಇಕಾಮ ಉಲ್ಲಂಘಕರು, 1775 ಕಾರ್ಮಿಕ ಕಾನೂನು ಉಲ್ಲಂಘಕರು ಮತ್ತು 9229 ಗಡಿ ಉಲ್ಲಂಘಕರು ಸೇರಿದ್ದಾರೆ.
ಸೌದಿ ಅರೇಬಿಯಾವನ್ನು ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ 202 ವಿದೇಶಿಯರಲ್ಲಿ, 48 ಪ್ರತಿಶತ ಯೆಮೆನ್, 49 ಪ್ರತಿಶತ ಇಥಿಯೋಪಿಯನ್ನರು ಮತ್ತು 3 ಪ್ರತಿಶತದಷ್ಟು ವಿದೇಶಿಯರು ಸೇರಿದ್ದಾರೆಂದು ಸಚಿವಾಲಯವು ತಿಳಿಸಿದೆ. ಅದೇ ಸಮಯದಲ್ಲಿ, ಕಾನೂನುಬಾಹಿರ ನಿವಾಸಿಗಳನ್ನು ನೇಮಿಸುವ ಮತ್ತು ವಸತಿ ಮತ್ತು ಪ್ರಯಾಣದ ಸೌಲಭ್ಯಗಳನ್ನು ಒದಗಿಸುವವರು ಕಠಿಣ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಗೃಹ ಸಚಿವಾಲಯ ಎಚ್ಚರಿಸಿದೆ.
ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಅನೇಕ ವಿದೇಶಿಯರನ್ನು ಗಡೀಪಾರು ಮಾಡಲಾಗಿದ್ದು., ಹೀಗೆ ಗಡೀಪಾರು ಮಾಡಲ್ಪಟ್ಟ ವಿದೇಶಿಗಳು ನಂತರ ಸೌದಿ ಅರೇಬಿಯಾಕ್ಕೆ ಕೆಲಸದ ವೀಸಾದಲ್ಲಿ ಬರಲು ಸಾಧ್ಯವಿಲ್ಲ ಎಂದು ಜವಾಝಾತ್ ಸ್ಪಷ್ಟಪಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.