ರಿಯಾದಿನಲ್ಲಿ ಕೆಲಸ ಮಾಡುತ್ತಿದ್ದ ಉಪ್ಪಿನಂಗಡಿ ನಿವಾಸಿ ಇಸ್ಮಾಯಿಲ್ ಕೊಡಿಪ್ಪಾಡಿ ಎಂಬ ವ್ಯಕ್ತಿಯೊಬ್ಬರು 06/09/2021ರಂದು ಹೃದಯಾಘಾತದಿಂದ ನಿಧನರಾದ ಸುದ್ದಿಯನ್ನು ರಿಯಾದ್ ಝೋನ್ ಸಾಂತ್ವನ ಇಲಾಖೆಗೆ ಮೃತ ವ್ಯಕ್ತಿಯ ಅಂಗಡಿ ಮಾಲಕರಾದ ಮನ್ಸೂರ್ರವರು ಮಾಹಿತಿ ನೀಡಿದ ತಕ್ಷಣ ಕಾರ್ಯಪ್ರವೃತ್ತರಾದ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮಜೀದ್ ವಿಟ್ಲ ಮತ್ತು ದಮ್ಮಾಮ್ ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಭಾಷಾ ಗಂಗಾವಳಿಯವರು ಭಾರತೀಯ ರಾಯಭಾರಿ ಕಚೇರಿಯ ದಾಖಲೆಗಳನ್ನು ಮಾಡಿಸಿ ಸಹಕರಿಸಿದರು. ಇತರ ದಾಖಲೆಗಳನ್ನು ಕಂಪೆನಿಯ ಸ್ಪಾನ್ಸರ್, ಮನ್ಸೂರ್ ಬಾಯ್, ಕೆಸಿಎಫ್ ನಾಯಕರಾದ ಫಾರೂಕ್ ಪಾಣೆಮಂಗಳೂರು ಮಾಡಿಸಿದರು. ಊರಿನಿಂದ ಬೇಕಾದ ದಾಖಲೆಗಳನ್ನು ತ್ವರಿತವಾಗಿ ಮಾಡಿಸಲು ಮೃತ ವ್ಯಕ್ತಿಯ ಸಹೋದರ ಝಕರಿಯಾ ಹಾಗೂ ವಕೀಲ ಅಶ್ರಫ್ ಮಾಡಿಸಿ ಸಹಕರಿಸಿದರು.
ದಾಖಲೆಗಳು ತಯಾರಾದ ತಕ್ಷಣ 09/09/2021 ರಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ನಾಯಕರಾದ ಅಬ್ದುಲ್ಲಾ ಮದನಿಯವರ ನೇತೃತ್ವದಲ್ಲಿ ರಿಯಾದಿನ ನಸೀಮ್ ಕಬ್ರ್ ಸ್ಥಾನದಲ್ಲಿ ದಫನ ಕಾರ್ಯವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಹನೀಫ್ ಕಣ್ಣೂರು, ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷ ಮಜೀದ್ ವಿಟ್ಲ, ಝೋನ್ ನಾಯಕರುಗಳಾದ ಫಾರೂಕ್ ಪಾಣೆಮಂಗಳೂರು, ಸಮೀರ್ ಜೆಪ್ಪು, ರಮೀಝ್ ಕುಳಾಯಿ, ಲತೀಫ್ ಅಶ್ರಫಿ, ಅಶ್ರಫ್ ಗುರುಪುರ ಮತ್ತು ಮೃತ ವ್ಯಕ್ತಿಯ ಸಂಬಂಧಿಗಳಾದ ನಾಸಿರ್ ಉಪ್ಪಿನಂಗಡಿ, ಬಶೀರ್ ಮತ್ತು ಮುಹಮ್ಮದ್ ಹಾಗೂ ಮೃತ ವ್ಯಕ್ತಿಯ ಕಂಪೆನಿ ಸಂಪೂರ್ಣವಾಗಿ ಸಹಕಾರ ನೀಡಿದರು. ಮೃತರ ಕುಟುಂಬಸ್ಥರು, ಗೆಳೆಯರು ಮತ್ತು ಕೆಸಿಎಫ್ ನಾಯಕರು, ಕಾರ್ಯಕರ್ತರು ಭಾಗಿಯಾಗಿ ಮೃತರಿಗಾಗಿ ದುಆ ನೆರವೇರಿಸಿದರು.
ಮೃತರು ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.