(www.vknews.com) : ದಿನಾಂಕ 25.09.2021 ರಂದು ಗುರುಗ್ರಾಮ, ನವ ದೆಹಲಿಯ ಏ ಕೆ ಸ್ ಸಂಸ್ಥೆಯು ಆಯೋಜಿಸಿರುವ ಜಾಗತಿಕ ಶಿಕ್ಷಕರ ಪ್ರಶಸ್ತಿ 2021 (Global Teacher award 2021) ರ ಆಯ್ಕೆಯಲ್ಲಿ ಮಂಗಳೂರು ಮೂಲದ ಶ್ರೀಯುತ ಸುಜಿತ್ ಕುಮಾರ್ ಹೊಸದುರ್ಗ ರವರು ಆಯ್ಕೆ ಆಗಿದ್ದಾರೆ.
2010 ರಲ್ಲಿ ಶಿಕ್ಷಣ ವೃತ್ತಿಯನ್ನು ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜು, ಮಂಗಳೂರು, ಇಲ್ಲಿ ಎಲೆಕ್ಟ್ರಾನಿಕ್ಸ್ ಶಿಕ್ಷಕರಾಗಿ ವೃತಿ ಆರಂಭಿಸಿದ ಇವರು , ಮುಂದೆ ಕತಾರ್ ನ ಗ್ರೀನ್ವುಡ್ ಅಂತಾರಾಷ್ಟ್ರೀಯ ವಿದ್ಯಾ ಸಂಸ್ಥೆಯಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಡಿ ಪಿ ಸ್ ಮೊನಾರ್ಕ್ ಅಂತಾರಾಷ್ಟ್ರೀಯ ವಿದ್ಯಾ ಸಂಸ್ಥೆ ಯಲ್ಲಿ ಹಿರಿಯ ಶಾಲಾ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಸುಮಾರು 110 ದೇಶಗಳ ಇತರ ಪ್ರಶಸ್ತಿ ಪುರಸ್ಕೃತರೊಂದಿಗೆ ತಮ್ಮ ಪ್ರಶಸ್ತಿಯನ್ನು 10.10.2021 ರಂದು ಸ್ವೀಕರಿಸಲಿದ್ದಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.