(ವಿಶ್ವ ಕನ್ನಡಿಗ ನ್ಯೂಸ್) : ಮುಂಬೈ ಇಂಡಿಯನ್ಸ್ ನಾಯಕ ಮತ್ತು ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಐಪಿಎಲ್ನಲ್ಲಿ ಒಂದೇ ತಂಡದ ವಿರುದ್ಧ 1000 ರನ್ ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಐಪಿಎಲ್ 2021 ರ 34 ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಅವರು ಈ ಸಾಧನೆ ಮಾಡಿದರು.
ಐಪಿಎಲ್ ನಲ್ಲಿ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಆಡಿರುವ ರೋಹಿತ್ ಒಟ್ಟು 29 ಪಂದ್ಯಗಳಿಂದ ಈ ಸಾಧನೆ ಮಾಡಿದ್ದಾರೆ. ಅವರ ಅತ್ಯಧಿಕ ಸ್ಕೋರ್ 109*, ಇದು ಲೀಗ್ನಲ್ಲಿ ಅವರ ಏಕೈಕ ಶತಕವಾಗಿದೆ.
ಕೆಕೆಆರ್ ವಿರುದ್ಧ, ಈ ಸಾಧನೆಯನ್ನು ಮಾಡಿರುವ ಅವರು, ಸರಾಸರಿ 48.04 ರಲ್ಲಿ ಆರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಸರಾಸರಿಯು ಐಪಿಎಲ್ನಲ್ಲಿ ಒಂದು ತಂಡದ ವಿರುದ್ಧ ಅವರ ಅತ್ಯುತ್ತಮವಾಗಿದೆ.
ವರದಿ : ಹುಸೈನ್ ಕುಂಬ್ರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.