ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸೌದಿ ಗಜೆಟ್ ಟ್ವಿಟ್ಟರ್ ಖಾತೆಯ ವಾಸ್ತವಾಂಶವೇನು?
(www.vknews.com) : ಅಕ್ಟೋಬರ್ 1 ರಿಂದ ಭಾರತದಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣದ ನಿಷೇಧವನ್ನು ತೆಗೆದುಹಾಕಲಾಗುವುದು ಎಂಬ ಸೌದಿ ಗಜೆಟ್ ಟ್ವಿಟ್ಟರ್ ಖಾತೆಯ ಸ್ಕ್ರೀನ್ ಶಾಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ವದಂತಿಯ ಮಾಹಿತಿಗಾಗಿ ಅನೇಕ ವಲಸಿಗರು ವಿಕೆ ನ್ಯೂಸನ್ನು ಸಂಪರ್ಕಿಸುತ್ತಿದ್ದಾರೆ.
ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಲಸಿಕೆಯನ್ನು ಪೂರ್ಣಗೊಳಿಸಿದವರು ಅಕ್ಟೋಬರ್ 1 ರಿಂದ ನೇರವಾಗಿ ಸೌದಿ ಅರೇಬಿಯಾಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಸ್ಕ್ರೀನ್ ಶಾಟ್ ತೋರಿಸುತ್ತದೆ. ಆದರೆ ಸೌದಿ ಗೆಜೆಟ್ನ ಟ್ವಿಟರ್ ಖಾತೆ ಮತ್ತು ಸೌದಿ ಗೆಜೆಟ್ನ ನ್ಯೂಸ್ ಪೋರ್ಟಲ್ ನೋಡಿದರೆ ಇದು ಸಂಪೂರ್ಣ ನಕಲಿ ಸುದ್ದಿ ಎಂದು ತಿಳಿಯುತ್ತದೆ. ವಾಸ್ತವವೆಂದರೆ ಸೌದಿ ಗಜೆಟ್ ಅಂತಹ ಸುದ್ದಿಯನ್ನು ಎಂದಿಗೂ ಪ್ರಕಟಿಸಿಲ್ಲ.
ಆದರೆ ಮೂಲದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ನಕಲಿ ಸುದ್ದಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ಸೌದಿ ಆಂತರಿಕ ಸಚಿವಾಲಯವು ಇಂತಹ ಸುದ್ದಿಯನ್ನು ಮೊದಲು ಘೋಷಿಸುತ್ತದೆ, ಆದ್ದರಿಂದ ಜನರು ಯಾವುದೇ ಸ್ಕ್ರೀನ್ ಶಾಟ್ ಗೆ ಮರುಳಾಗದಂತೆ ಎಚ್ಚರಿಕೆ ವಹಿಸಬೇಕು.
ಪ್ರಸ್ತುತ, ಸೌದಿ ಅರೇಬಿಯಾದಿಂದ ಎರಡು ಡೋಸ್ ಲಸಿಕೆ ತೆಗೆದುಕೊಂಡ ಭಾರತೀಯರು ಮಾತ್ರ ನೇರವಾಗಿ ಸೌದಿ ಅರೇಬಿಯಾಕ್ಕೆ ಹೋಗಬಹುದು. ಇತರರು 14 ದಿನಗಳ ಕಾಲ ಭಾರತದ ಹೊರಗಿನ ದೇಶದಲ್ಲಿ ಉಳಿದ ನಂತರ ಸೌದಿ ಅರೇಬಿಯಾವನ್ನು ಪ್ರವೇಶಿಸಬೇಕಾಗುತ್ತದೆ.
ವರದಿ: ಎಸ್.ಎ.ರಹಿಮಾನ್ ಮಿತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.