ಮುಂಬೈ (ವಿಶ್ವ ಕನ್ನಡಿಗ ನ್ಯೂಸ್) : ಕಂಗನಾ ರಣಾವತ್ ನಿನ್ನೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ ಛಾಯಾಗ್ರಾಹಕರಿಗೆ ಪೋಸ್ ನೀಡಿದರು, ತನ್ನ ಕಾರಿನಿಂದ ಕೆಳಗಿಳಿದು ಟರ್ಮಿನಲ್ ಒಳಗೆ ನಡೆದಾಗ ಅವರು ವಿಜಯದ ಚಿಹ್ನೆಯನ್ನು ತೋರಿಸುತ್ತಿದ್ದರು. ಈ ಸಂದರ್ಭದಲ್ಲಿ ಆಕೆ ಫೇಸ್ ಮಾಸ್ಕ್ ಧರಿಸಿರಲಿಲ್ಲ.
ವಿಡಿಯೋದಲ್ಲಿ ವಿಮಾನ ನಿಲ್ದಾಣದಲ್ಲಿ “ಫೇಸ್ ಮಾಸ್ಕ್ ಧರಿಸದವರಿಗೆ ಪ್ರವೇಶವಿಲ್ಲ” ಎಂಬ ಬೋರ್ಡ್ ಕಾಣಿಸುತ್ತಿದ್ದು, ಕಂಗನಾ ರನಾವತ್ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ, ಆದರೆ ಯಾವ ಅಧಿಕಾರಿಗಳೂ ಕೂಡ ಇದನ್ನು ಪ್ರಶ್ನಿಸುತ್ತಿಲ್ಲ.
ಇದೀಗ ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಸೆಲೆಬ್ರಿಟಿಗಳಿಗೆ ನಿಯಮದಿಂದ ವಿನಾಯಿತಿ ಇದೆಯೇ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.