ಕೋಝಿಕ್ಕೋಡ್(ವಿಶ್ವಕನ್ನಡಿಗ ನ್ಯೂಸ್): ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಐಮರ್ ಬ್ಯುಸಿನೆಸ್ ಸ್ಕೂಲ್ ನ ಯೋಜನೆಗೆ ರಾಹುಲ್ ಗಾಂಧಿಯವರು ಚಾಲನೆ ನೀಡಿ ಉದ್ಘಾಟಿಸಿದರು. ದೇಶವು ಸಾಮಾಜಿಕ ಮೌಲ್ಯಗಳನ್ನು ಹೊಂದಿರುವ ವಿದ್ಯಾರ್ಥಿ ಸಮುದಾಯವನ್ನು ಬಯಸುತ್ತದೆ. ಬುದ್ಧಿವಂತಿಕೆ, ಗುರುತಿನ ಪ್ರಜ್ಞೆ ಮತ್ತು ದೇಶಪ್ರೇಮವು ಜ್ಞಾನದ ಜೊತೆಯಲ್ಲಿ ಸಾಗಿದಾಗ ಸರಿಯಾದ ಅಭಿವೃದ್ಧಿ ಸಾಧ್ಯ. ಮರ್ಕಝ್ ನಾಲೆಡ್ಜ್ ಸಿಟಿಯು ಇದಕ್ಕೆ ಉದಾಹರಣೆ ಎಂದು ರಾಹುಲ್ ಗಾಂಧಿ ಹೇಳಿದರು.
ಡಾ.ಮಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ರಾಹುಲ್ ಗಾಂಧಿಯಂತಹ ಅನುಭವಿ ನಾಯಕನ ಸಲಹೆಯು ಈ ನಗರಕ್ಕೆ ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ವಿರೋಧ ಪಕ್ಷದ ನಾಯಕ ವಿ.ಡಿ.ಸತೀಸನ್ ಅವರು ಬಿಸಿನೆಸ್ ಸ್ಕೂಲ್ ನ ಅಧಿಕೃತ ವೆಬ್ ಸೈಟ್ ಅನ್ನು ಚಾಲನೆ ನೀಡುವ ಮೂಲಕ ಪ್ರಾರಂಬಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಎಂ. ಪಿ ಕರಪತ್ರವನ್ನು ಬಿಡುಗಡೆ ಮಾಡಿದರು.
ಮುಂದಿನ ದಿನಗಳಲ್ಲಿ ಮಾರ್ಕಸ್ ನಾಲೆಡ್ಜ್ ಸಿಟಿ ವಿಶ್ವದರ್ಜೆಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವಾಗಲಿದೆ ಎಂದು ಅವರು ಹೇಳಿದರು.
ಡಾ. ಅಬ್ದುಲ್ ಸಲಾಂ – ಸಿಇಒ, ಸಿ. ಮುಹಮ್ಮದ್ ಫೈಝಿ ಮತ್ತು ಮಾರ್ಕಸ್ ನಾಲೆಡ್ಜ್ ಸಿಟಿ ಸಿಇಒ ತನ್ವೀರ್ ಒಮರ್ ಮಾತನಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.