ಶ್ರೀನಿವಾಸಪುರ ( ವಿಶ್ವಕನ್ನಡಿಗ ನ್ಯೂಸ್ ):ಯುವಕ ಯುವತಿಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು. ಜಾತಿ , ಮತ ಭೇದವಿಲ್ಲದೆ ಅಗತ್ಯ ಇರುವವರಿಗೆ ರಕ್ತ ನೀಡಬೇಕು ಎಂದು ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಹೇಳಿದರು.
ತಾಲ್ಲೂಕಿನ ದಳಸನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಯಾಲಯ , ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೋಲಾರದ ಎಸ್ ಎನ್ ಆರ್ ಆಸ್ಪತ್ರೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಉಚಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು , ದೇಶದಲ್ಲಿ ಅಗತ್ಯ ಪ್ರಮಾಣದ ರಕ್ತ ಸಿಗದಿರುವ ಪರಿಣಾಮವಾಗಿ, ರಕ್ತದ ಅಗತ್ಯವಿರುವ ಎಷ್ಟೋ ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್ ಮಾತನಾಡಿ , ಮಾನವೀಯ ನಲೆಯಲ್ಲಿ ರಕ್ತದಾನಕ್ಕಿಂತ ಮಿಗಿಲಾದ ದಾನ ಇನ್ನೊಂದಿಲ್ಲ ಎಂದು ಹೇಳಿದರು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಫೇಜಿಯಾ ಖಾನಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಸರಸ್ವತಮ್ಮ , ಸದಸ್ಯರಾದ ಉಮಾದೇವಿ , ಜಗದೀಶ್ , ವಿಶ್ವನಾಥರಡ್ಡಿ , ರಿಹಾನ್ ತಾಜ್ , ಶೋಭಾ ಷರೀನ್ , ಶ್ರೀನಿವಾಸಮೂರ್ತಿ , ಆರೋಗ್ಯ ನಿರೀಕ್ಷಕ ಅನಿಲ್ ಹಾಜರಿದ್ದರು. ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.