ದುಬೈ(ವಿಶ್ವಕನ್ನಡಿಗ ನ್ಯೂಸ್): ಕೋವಿಡ್-19 ಕಾರಣದಿಂದ ವಿಳಂಭವಾಗಿದ್ದ ವಿಶ್ವದ ಅತೀ ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮ ದುಬೈ ಎಕ್ಸ್ ಪೋ ಇಂದು ಅಧಿಕೃತವಾಗಿ ಉಧ್ಘಾಟನೆಗೊಂಡಿತು.
ಯುಎಇಯ ಉಪಾಧ್ಯಕ್ಷ ಮತ್ತು ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಮತ್ತು ಅಬುಧಾಬಿಯ ಕಿರೀಟ ರಾಜಕುಮಾರ ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್ ಶೇಖ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ರವರು ನೇತೃತ್ವ ನೀಡಿದರು.
ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ – ಪ್ರಪಂಚದ ಶ್ರೇಷ್ಠ ಪ್ರದರ್ಶನಕ್ಕೆ ಅತೀ ತೊಡ್ಡ ವೇದಿಕೆಯಾಗಿ ಮಾತ್ರವಲ್ಲದೆ, ಒಗ್ಗಟ್ಟನ್ನು ರೂಪಿಸಲು 192 ದೇಶಗಳ ಸಂಸ್ಕೃತಿಗಳನ್ನು ಜಗತ್ತಿಗೆ ತೋರಿಸಲು ದುಬೈ ಎಕ್ಸ್ ಪೋ ವೇದಿಕೆಯು ಸಜ್ಜಾಗಿ ನಿಂತಿವೆ.
ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್, ದುಬೈ ಕ್ರೌನ್ ಪ್ರಿನ್ಸ್, ಅಧಿಕೃತವಾಗಿ ಎಕ್ಸ್ಪೋವನ್ನು ಉಧ್ಘಾಟಿಸಿದರು. ಇದು ಮುಂದಿನ ವರ್ಷ ಮಾರ್ಚ್ 31 ರವರೆಗೆ ನಡೆಯಲಿದೆ.
“ಅಂತಾರಾಷ್ಟ್ರೀಯ ನಂಬಿಕೆಯನ್ನು ಒತ್ತಿಹೇಳುತ್ತಾ 192 ದೇಶಗಳ ಭಾಗವಹಿಸುವಿಕೆಯೊಂದಿಗೆ ಆರು ತಿಂಗಳ ಕಾಲ ನಡೆಯುವ ಅತಿದೊಡ್ಡ ಜಾಗತಿಕ ಕಾರ್ಯಕ್ರಮವು ನಮ್ಮ ದೇಶದಲ್ಲಿ ನಡೆಯುತ್ತಿರುವುದು ಹೆಮ್ಮೆ ಅನಿಸುತ್ತಿದೆ ಎಂದು ಶೇಖ್ ಮೊಹಮ್ಮದ್ ಹೇಳಿದರು.
ಉಧ್ಘಾಟನಾ ಕಾರ್ಯಕ್ರಮದ ವೀಡಿಯೋ ವೀಕ್ಷಿಸಲು ಕೆಳಗಿನ ಲಿಂಕ್ ಒತ್ತಿ:
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.