ಸೊಹಾರ್(ವಿಶ್ವಕನ್ನಡಿಗ ನ್ಯೂಸ್): ಶಾಹೀನ್ ಚಂಡಮಾರುತ ಪ್ರಭಾವ ಬೀರಬಹುದಾದ ಪ್ರದೇಶಗಳಲ್ಲಿ ಹೆಚ್ಚಿನ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದು ಇದೀಗ 143 ಆಶ್ರಯ ಕೇಂದ್ರಗಳನ್ನು ಸಿದ್ಧಪಡಿಸಲಾಗಿದ್ದು ಅದರಲ್ಲಿ 53 ಕೇಂದ್ರಗಳನ್ನು ಸಕ್ರಿಯಗೊಳಿಸಲಾಗಿದೆ, 2,173 ನಾಗರಿಕರು ಮತ್ತು 846 ನಿವಾಸಿಗಳು ಸೇರಿದಂತೆ 3,019 ವ್ಯಕ್ತಿಗಳನ್ನು ಸ್ಥಳಾಂತರಿಸಲಾಗಿದೆ.
ಮಜಾಸ್ ಅಲ್-ಕುಬ್ರಾದಿಂದ ಸೊಹಾರ್ನ ವಿಲಾಯತ್ ಕೇಂದ್ರದವರೆಗೆ ವಿಸ್ತರಿಸುವ ಕರಾವಳಿ ರಸ್ತೆಯ ದೀಪಗಳಿಗೆ ವಿದ್ಯುತ್ ಸರಬರಾಜು ಸಂಪರ್ಕ ಕಡಿತಗೊಳಿಸಲಾಗಿದೆ.
ಚಂಡಮಾರುತವು ಇಂದು ರಾತ್ರಿ 10 ಗಂಟೆಗೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆಯಿದ್ದು, ಅಲ್ ಮುಸನ್ನಾದಿಂದ ಸೊಹಾರ್ ವರೆಗಿನ ಜನರು ಹೊರಹೋಗದಂತೆ ಸೂಚಿಸಲಾಗಿದೆ. ಸುರಕ್ಷಿತ ಸ್ಥಳದಲ್ಲಿ ಉಳಿಯಲು ವಿನಂತಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.