ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಶಾಹೀನ್ ಚಂಡಮಾರುತವು ಒಮಾನಿಗೆ ಅಪ್ಪಳಿಸಿದ್ದು, ಒಮಾನಿನ ಕೆಲವು ಗವರ್ನರೇಟ್ ಗಳಲ್ಲಿ ನಾಶ ನಷ್ಠಗಳು ಉಂಟಾಗಿದ್ದು, ಒಂದು ಮಗು ಸೇರಿ ನಾಲ್ಕು ಜನರು ಮೃತರಾಗಿದ್ದಾರೆ.
ಕಳೆದ ದಿನ ಚಂಡಮಾರುತದ ಮಸ್ಕತ್ ಗವರ್ನರೇಟ್, ರುಸ್ತಾಕ್, ಬರ್ಕಾ, ಹಾಗೂ ಕೆಲವು ಕಡೆಗಳಲ್ಲಿ ಪ್ರಭಾವ ಬೀರಿದ್ದು ನಿನ್ನೆ ದಿನವಿಡೀ ಮಳೆಯಾಗಿದೆ. ಮಳೆಯ ತೀವ್ರತೆಯಿಂದ ತಗ್ಗು ಪ್ರದೇಶಗಳು ಕೆಲವು ಕಡೆ ಮುಳುಗಡೆಯಾಗಿದೆ, ವಾಹನಗಳು ಕೊಚ್ಚಿ ಹೋಗಿವೆ.
ಕಳೆದ ರಾತ್ರಿ ಮುಸನ್ನಾ ಹಾಗೂ ಸುವೈಕ್ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಹಾಗೂ ಗಾಳಿ ಬೀಸಿದೆ. ಗಾಳಿಯ ತೀವ್ರತೆಗೆ ಸುವೈಕ್ ನ ಕೆಲವು ಕಡೆ ಅಂಗಡಿಗಳು ಹಾನಿಗೊಳಗಾಗಿದೆ. ಮಳೆಯ ನೀರು ರಾಷ್ಟ್ರೀಯ ಹೆದ್ದಾರಿಯವರೆಗೆ ಬಂದಿದ್ದು ರಸ್ತೆಗಳು ಕೊಚ್ಚಿ ಹೋಗಿದೆ.
ಸುವೈಕ್ ನಲ್ಲಿ ಕಾರ್ಮಿಕರಿರುವ ಕಟ್ಟಡವೊಂದು ಕುಸಿದಿದ್ದು, ಜನರು ಅಪಾಯದಿಂದ ಪಾರಾಗಿದ್ದಾರೆ.
ಎರಡು ಕಾರ್ಮಿಕರು ಹಾಗೂ ಒಂದು ಮಗು ಹಾಗೂ ನಿನ್ನೆ ನೀರಿನಲ್ಲಿ ಕೊಚ್ಚಿಹೋಗಿದ್ದ ಒಬ್ಬರ ಮೃತ ಶರೀರವು ಪತ್ತೆಯಾಗಿದೆ. ಒಟ್ಟಾಗಿ ನಾಲ್ಕು ಜನರು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
(fhoto: Haitam al farsi, oman observer)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.