ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಸೋಮವಾರ(ಅಕ್ಟೋಬರ್ 4) ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹೆಚ್ಚು ಹೊತ್ತು ಮೈದಾನದಲ್ಲಿದ್ದರೂ ರನ್ ಗಳಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ವಿಚಾರದ ಕುರಿತು ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್, ‘ಎಂ ಎಸ್ ಧೋನಿ ಮಾತ್ರವಲ್ಲ ಎರಡೂ ತಂಡಗಳ ಆಟಗಾರರು ಕೂಡ ಈ ಪಂದ್ಯದಲ್ಲಿ ರನ್ ಗಳಿಸಲು ಪರದಾಡಿದರು. ಪಿಚ್ ರನ್ ಗಳಿಸಲು ಸಹಕಾರಿಯಾಗಿರಲಿಲ್ಲ, ಹೀಗಾಗಿ ಎರಡೂ ತಂಡಗಳು ಕೂಡ ಅಲ್ಪ ಮೊತ್ತವನ್ನು ಕಲೆಹಾಕಿದವು’ ಎಂದು ಎಂ ಎಸ್ ಧೋನಿ ನಿಧಾನಗತಿಯ ಬ್ಯಾಟಿಂಗ್ನ್ನು ಅವರು ಸಮರ್ಥಿಸಿಕೊಂಡರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.