ಅಡ್ಯಾರ್ (www.vknews.com) : ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊಟೆಲ್ ಒಂದರ ತ್ಯಾಜ್ಯವನ್ನು ರಸ್ತೆ ಬದಿ ಬಿಸಾಡುವುದನ್ನು ಗ್ರಾಮ ಪಂಚಾಯತ್ ನ ಅಧ್ಯಕ್ಷರು ಪಿಡಿಒ ಮತ್ತು ಸಿಬ್ಬಂದಿ ಸೇರಿ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದ್ದು. ಕೇಳಿದಾಗ ನಮ್ಮ ಹೋಟಲ್ ನ ತ್ಯಾಜ್ಯ ಅಲ್ಲವೇ ಅಲ್ಲವೆಂದು ವಾಗ್ವಾದವನ್ನು ಮಾಡಿರುತ್ತಾರೆ, ಆಗ ಅದೇ ಹೋಟೆಲ್ ನ ಎದುರು ತ್ಯಾಜ್ಯವನ್ನು ಸುರಿದು ಪರಿಶೀಲಿಸಿದಾಗ ಆ ಹೋಟೆಲ್ ನ ಬಿಲ್ ಇರುವುದು ಕಂಡುಬಂದಿರುತ್ತದೆ. ಇದಕ್ಕೆ ಅಡ್ಯಾರ್ ಗ್ರಾಮ ಪಂಚಾಯತ್ ನಿಂದ ಎಚ್ಚರಿಕೆಯನ್ನು ನೀಡಿ ರೂ 10,000 ದಂಡವನ್ನು ವಿಧಿಸಲಾಗಿರುತ್ತದೆ.
ಮುಂದಿನ ದಿನಗಳಲ್ಲಿ ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡುವುದು ಕಂಡು ಬಂದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.