ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):ಮಾಲೂರು ಪಟ್ಟಣ್ಣದ ಹೊರವಲಯದಲ್ಲಿನ ರೈಲ್ವೇನಿಲ್ದಾಣದ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2021-2022 ನೇ ಸಾಲಿನ ದಾಖಲಾತಿಗಳು ನಡೆಯುತ್ತಿದ್ದು. ಇದೇ ತಿಂಗಳ ಆಕ್ಟೋಬರ್ 15 ದಾಖಲಾತಿಯಾಗಲು ಕೊನೆಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವೆಂಕಟೇಶ್.ವೈ ತಿಳಿಸಿದ್ದಾರೆ.
ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾತನಾಡಿದ ಅವರು ವಿಶೇಷ ಸಾಧನೆಗೈದ, ಉತ್ತಮ ಪ್ರಾಧ್ಯಾಪಕರ ತಂಡ, ಸುಸಜ್ಜಿತ ಕಾಲೇಜು ವ್ಯವಸ್ಥೆ, ಉತ್ತಮ ಫಲಿತಾಂಶ, ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಒಳಗೊಂಡ ಕಾಲೇಜು ಇದಾಗಿದ್ದು, ಗ್ರಾಮೀಣ ಭಾಗದ ಎಲ್ಲಾ ವಿದ್ಯಾರ್ಥಿಗಳ ಸರ್ವ ರೀತಿಯ ಬೆಳವಣಿಗೆಗೆ ಉತ್ತಮ ತಳಹದಿ ಪದವಿ ಕಾಲೇಜು ಆಗಿದೆ.ಈಗಾಗಲೇ ದಾಖಲಾತಿಗಳು ನಡೆಯುತ್ತಿದ್ದು ಪಿ.ಯು.ಸಿ ಉತ್ತೀರ್ಣರಾದವರಿಗೆ ಬಿ.ಎ. ಬಿಎಸ್ಸಿ, ಬಿಕಾಂ, ಬಿಎಸ್ ಡಬ್ಲ್ಯೂ, ಈ ರೀತಿಯ ಅನೇಕ ಕೋರ್ಸಗಳು ಲಭ್ಯವಿದೆ. ನಿಮಗೆ ತಿಳಿದ ವಿದ್ಯಾರ್ಥಿಗಳಿಗೆ ಪೋಷಕರಿಗೆ ಮಾಹಿತಿ ತಿಳಿಸಿ ದಾಖಲಾತಿ ಪಡೆಯಿರಿ ಎಂದು” ತಿಳಿಸಿದ್ದಾರೆ.
ಈ ಬಗ್ಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷರಾದ ಶ್ರೀನಿಧಿ ರವರು ಮಾತನಾಡಿ “ನಮ್ಮ ಕಾಲೇಜು ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು, ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವವರು ನಿಮಗೆ ತಿಳಿದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನಮ್ಮ ಕಾಲೇಜಿನಲ್ಲಿ ನೀಡುವ ಕೋರ್ಸಗಳ ಬಗ್ಗೆ , ಕಾಲೇಜಿನ ಪ್ರಾಧ್ಯಾಪಕರ ಬಗ್ಗೆ, ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಸಹಕಾರ ನೀಡಬೇಕಾಗಿ” ವಿನಂತಿಸಿದರು.
ಕಾಲೇಜಿನಲ್ಲಿ ನ್ಯಾಕ್ (ಬಿ) ಮಾನ್ಯತೆ ಪಡೆದಿದೆ, ಡಿಜಿಟಲ್ ಗ್ರಂಥಾಲಯ, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಲಯ, ಶುದ್ದ ಕುಡಿಯುವ ನೀರಿನ ಸೌಲಭ್ಯ, ಎನ್.ಎಸ್.ಎಸ್, ಎನ್ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ, ರೆಡ್ ಕ್ರಾಸ್, ಆನ್ ಲೈನ್ ತರಗತಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ಯೋಗ ತರಗತಿ, ಸಂಭಾಗಣ, ಸ್ಪೋಕನ್ ಇಂಗ್ಲಿಷ್ ತರಗತಿ ಈ ರೀತಿಯ ಎಲ್ಲಾ ಸೌಲಭ್ಯಗಳು ಇರುವ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ದಾಖಲಾತಿ ಮಾಡಿ ಎಂಬ ಮಾಹಿತಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ರೊ.ವೈ.ವೆಂಕಟೇಶ್ ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು.ಮಾಲೂರು. ಮೊ:9902267278.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.