ಒಮಾನ್(ವಿಶ್ವಕನ್ನಡಿಗ ನ್ಯೂಸ್): ಭಾರತದ ಗ್ರ್ಯಾಂಡ್ ಮುಫ್ತಿ ಮತ್ತು ಜಾಮಿಯಾ ಮರ್ಕಝ್ ಚಾನ್ಸೆಲರ್ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರನ್ನು ಯುಎಇ ಸರ್ಕಾರ 10 ವರ್ಷಗಳ ಗೋಲ್ಡ್ಸನ್ ವೀಸಾ ನೀಡಿ ಗೌರವಿಸಿದೆ. ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ದುಬೈ ನಿವಾಸ ಮತ್ತು ವಲಸೆ ಇಲಾಖೆ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಗೋಲ್ಡನ್ ವೀಸಾ ಪಡೆದರು.
ಯುಎಇ ಮತ್ತು ಜಾಮಿಯಾ ಮರ್ಕಝ್ ನಡುವೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಂಬಂಧಗಳು ಹಾಗೂ ಶೈಕ್ಷಣಿಕ ವಿನಿಮಯ ಮತ್ತು ದತ್ತಿ ಚಟುವಟಿಕೆಗಳನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ. ಶಿಕ್ಷಣ ಮತ್ತು ದತ್ತಿ ಚಟುವಟಿಕೆಗಳಿಗಾಗಿ ಭಾರತದಿಂದ ಗೋಲ್ಡನ್ ವೀಸಾ ಪಡೆದ ಮೊದಲ ವ್ಯಕ್ತಿ ಯಾಗಿರುವ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಉಸ್ತಾದ್ ರವರಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ಸಮಿತಿಯು ಅಭಿನಂದನಯನ್ನು ಪತ್ರಿಕಾ ಮೂಲಕ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.