ಕುಂದಾಪುರ (ವಿಶ್ವ ಕನ್ನಡಿಗ ನ್ಯೂಸ್ ) : ಅಂದು ಆರ್ ಎಸ್ ಎಸ್ ನಲ್ಲಿ ಪಳಗಿದವರೇ ಇಂದು ಪ್ರಧಾನಿ ಗದ್ದುಗೆ ಏರಿದ್ದು, ರಾಷ್ಟ್ರಪತಿ ಕೂಡಾ ಆರ್ ಎಸ್ ಎಸ್ ನಿಂದಲೇ ಬಂದವರು, ಆರ್ ಎಸ್ ಎಸ್ ಬಗ್ಗೆ ತುಚ್ಛವಾಗಿ ಮಾತಾಡಿದ ಮುಖಂಡರೋರ್ವರಿಗೆ ನೇರವಾಗಿ ಟಾಂಗ್ ಕೊಟ್ಟಿದ್ದು ಶ್ರೀಕಾಂತ್ ಶೆಟ್ಟಿ ಕಾರ್ಕಳ. ಅವರು ಸಿದ್ದಾಪುರದಲ್ಲಿ ನಡೆದ ಸಿದ್ದಾಪುರ ವಲಯ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ನಡೆದ ಬ್ರಹತ್ ಜನಜಾಗ್ರತಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ನಿರಂತರ ಮತಾಂತರ, ಲವ್ ಜಿಹಾದ್ ಹಾಗೂ ಸರಣಿ ಗೋ ಕಳ್ಳತನದ ವಿರುದ್ಧದ ಬ್ರಹತ್ ಜನಜಾಗ್ರತಿ ಸಭೆಯಲ್ಲಿ ಮಾತನಾಡುತ್ತಾ, ಆರ್ ಎಸ್ ಎಸ್ ಶಾಖೆಯಲ್ಲಿ ರಾಷ್ಟ್ರಿಯತೆ ಎಂದರೇನು ? ಹಿಂದುತ್ವ ಬಗಗೆ ಕಲಿಸಿಕೊಡುತ್ತೇವೆ. ಕೇಸರಿ ಶಾಲು ಹಾಕಿ ಕೊಂಡು ಆರ್ ಎಸ್ ಎಸ್ ನ ಬಯ್ಯುವ ಕೆಲಸ ಮಾಡಿದರೆ ನಿಮ್ಮ ಭಾಷೆಯಲ್ಲಿ ನಾವು ಉತ್ತರಿಸುತ್ತೇವೆ ಅದಕ್ಕೆ ಇರುವುದು ಹಿಂದೂ ಜಾಗರಣ ವೇದಿಕೆ ಎಂದರು. ಸಭೆಯಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರು, ಹಿಂದೂ ಭಾಂದವರು ಸಾಕಷ್ಟು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.