ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಹೌದು, ಇವಾಗಲೆ ಮೊದಲ ಬಾರಿ ಸ್ಯಾಂಡಲ್ ವುಡ್ ನಲ್ಲಿ ಮಾಂತ್ರಿಕ ಹಾಡುಗಾರ ಸಿದ್ದ್ ಶ್ರಿರಾಮ್ ಹಾಡಿರುವ ಹಾಯಾಗಿದೆ ಸಾಂಗ್ ಜನಮನ ಗೆದ್ದು ಸೂಪರ್ ಹಿಟ್ ಆಗಿ ಎಲ್ಲೆಲ್ಲೂ ಕೇಳುತ್ತಿರುವಾಗಲೆ, ಇನ್ನೊಂದು ಹಾಡನ್ನು ಟಾಮ್ ಅಂಡ್ ಜೆರ್ರಿ ತಂಡ ಬಿಡುಗಡೆ ಮಾಡಿದೆ, ಅದುವೆ ಕಾದಲ್ ಸಾಂಗ್. ಮತ್ತೊರ್ವ ದಕ್ಷಿಣ ಭಾರತದ ಖ್ಯಾತ ಸಂಗೀತ ಹಾಡುಗಾರ್ತಿ ಶ್ವೇತಾ ಮೊಹನ್ ಹಾಡಿರುವ ಕಾದಲ್ ಸಾಂಗ್ ಅಂತ್ಯಂತ ಮದುರವಾಗಿ ಮೂಡಿಬಂದಿದ್ದು, ಕಾದಲ್ ಗೀತೆಯನ್ನು ಆನಂದ್ ಆಡಿಯೊ ಮೂಲಕ ಚಿತ್ರ ತಂಡ ಬಿಡುಗಡೆ ಮಾಡಿದೆ.
ರಿದ್ದಿ ಸಿದ್ದಿ ಬ್ಯಾನರ್ ನಲ್ಲಿ ತಯಾರಾದ ಟಾಮ್ ಅಂಡ್ ಜೆರ್ರಿ ಚಲನಚಿತ್ರ ಇವಾಗ ಬಾರಿ ಕುತೂಹಲ ಸೃಷ್ಟಿಮಾಡುತ್ತಿದೆ. ಸಿನಿ ರಸಿಕರು ಕಾದು ನೊಡುತ್ತಿದ್ದಾರೆ ಸಿನೆಮಾ ಯಾವಾಗ ತೆರೆಗೆ ಬರಲಿದೆ ಎಂದು. ಅಧ್ಬುತ ಸಂಗೀತ ಹೊಂದಿರುವ ಟಾಮ್ ಆಂಡ್ ಜೆರ್ರಿ ಸಿನೆಮಾದಲ್ಲಿ ಸಕತ್ ಹಾಡುಗಳುನ್ನು ತಂಡ ನಿಡಿದೆ. ಸಿನೆಮಾದ ಸಂಗೀತ ಸಂಯೋಜನೆ ಮ್ಯಾಥ್ಯೂಸ್ ಮನು ನಿಡ್ಡಿದ್ದು. ಸಾಹಿತ್ಯ ಅಥನ್ಯ ರಚನಾ ಬರೆದಿದ್ದಾರೆ.
ನಿರ್ದೇಶನ ರಾಘವ್ ವಿನಯ್ ಶಿವಗಂಗೆ. ಮುಖ್ಯ ಭೂಮಿಕೆಯಲ್ಲಿ ನಿಶ್ಚಿತ್ ಕೊರೊಡಿ, ಜೊಡಿ ಹಕ್ಕಿ ಖ್ಯಾತಿ ಚೈತ್ರ ರಾವ್, ತಾರ ಅನುರಾಧ, ಜೈ ಜಗದೀಶ್, ಸೂರ್ಯಶೇಖರ್, ಸಂಪತ್ ಕುಮಾರ್, ಪ್ರಶಾಂತ ನಟನಾ ಇನ್ನಿತರ ಬಳಗ ಹೊಂದಿರುವ ಚಿತ್ರಕ್ಕೆ ರಾಜು ಶೆರೆಗಾರ್ ನಿರ್ಮಾಪಕರಾಗಿದ್ದು ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಸಿನೆಮಾ ಮಾಡಬೇಕೆಂಬ ಮಹತ್ವಾಕಾಂಕ್ಷೆಯ ನಿರ್ಮಾಪಕರು. ಹಾಗೆಯೇ ವಿನಯ್ ಚಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಸಿನೆಮಾದ ಟ್ರೈಲರ್ ಕೂಡ ಜನಮನಗೆಲ್ಲುದರಲ್ಲಿ ಎರಡು ಮಾತಿಲ್ಲ. ಸಿನಿರಸಿಕರು ಈ ಕಾದಲ್ ಹಾಡನ್ನು ಆನಂದ್ ಆಡಿಯೊ ಯೂಟ್ಯೂಬ್ ನಲ್ಲಿ ಕೇಳಿ, ಒಂದು ಉತ್ತಮ ಚಲನಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ಇರಲಿ ಎಂದು ಪ್ರಕಟನಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.