ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಅಕ್ಟೋಬರ್ 10 ಆದಿತ್ಯವಾರ ಮಧ್ಯಾಹ್ನ 3.00ಕ್ಕೆ ಉರೂಸ್-ಏ-ರಝ್ವಿ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಜಿಲ್ಲಾಧ್ಯಕ್ಷರಾದ ನವಾಝ್ ಸಖಾಫಿ ಅಡ್ಯಾರ್ ಪದವುರವರ ಅಧ್ಯಕ್ಷತೆಯಲ್ಲಿ ಅಡ್ಯಾರ್ ಕಣ್ಣೂರಿನ ಝಹ್ರತುಲ್ ಖುರ್ಆನ್ ಕಛೇರಿಯಲ್ಲಿ ನಡೆಯಿತು.
ಜಿಲ್ಲಾ ದಅ್ವಾ ಕಾರ್ಯದರ್ಶಿ ಆರಿಫ್ ಝುಹ್ರಿ ಮುಕ್ಕ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಲ್ಚರಲ್ ಕೌನ್ಸಿಲ್ ಕಾರ್ಯದರ್ಶಿ ಫಾರೂಖ್ ಸಖಾಫಿ ಕಾಟಿಪಳ್ಳ ಉದ್ಘಾಟಿಸಿದರು. ಖ್ಯಾತ ಲೇಖಕರಾದ ಇಸ್ಮಾಯಿಲ್ ನಈಮಿ ಮಂಗಳಪೇಟೆ ಇಮಾಂ ಅಹ್ಮದ್ ರಝಾ ಖಾನ್ ಬರೇಲ್ವಿ (ಖ.ಸಿ) ಮಹಾನರ ಅನುಸ್ಮರಣಾ ಪ್ರಭಾಷಣ ನಡೆಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ರೈನ್ಬೋ ಸದಸ್ಯರೊಬ್ಬರಿಗೆ ಐಡಿ ನೀಡುವಾ ಮೂಲಕ ಜಿಲ್ಲಾ ಮಟ್ಟದಲ್ಲಿ ರೈನ್ಬೋ ಐಡಿ ಉದ್ಘಾಟನೆ ಮಾಡಲಾಯಿತು. .
ಈ ಸಂದರ್ಭದಲ್ಲಿ ಜಿಲ್ಲಾ ವಿಸ್ಡಂ ಕಾರ್ಯದರ್ಶಿ ಸುಹೈಲ್ 10th ಮೈಲ್,ಕ್ಯಾಂಪಸ್ ಕಾರ್ಯದರ್ಶಿ ಝುಹೈರ್ ಮಾಸ್ಟರ್ ಬಜ್ಪೆ, ರೀಡ್ ಫ್ಲಸ್ ಕಾರ್ಯದರ್ಶಿ ಹಮೀದ್ ತಲಪಾಡಿ, ಐಟಿ ಕಾರ್ಯದರ್ಶಿ ಇರ್ಷಾದ್ ಹಾಜಿ ಗೂಡಿನಬಳಿ ಹಾಗೂ ಇನ್ನಿತರ ಜಿಲ್ಲಾ ಕಾರ್ಯಕಾರಿ ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ಪ್ರ.ಕಾರ್ಯದರ್ಶಿ ಹೈದರಾಲಿ 4 ನೇ ಬ್ಲಾಕ್ ಕಾಟಿಪಳ್ಳ ಸ್ವಾಗತಿಸಿ, ಜಿಲ್ಲಾ ಫಿನಾನ್ಸ್ ಸೆಕ್ರೆಟರಿ ಇಕ್ಬಾಲ್ ಮದ್ಯನಡ್ಕ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.